Kannada NewsKarnataka News

ಒಟ್ಟಿಗೇ ಇಹಲೋಕ ತ್ಯಜಿಸಿದ ನಿವೃತ್ತ ಶಿಕ್ಷಕ ದಂಪತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಇಲ್ಲಿಯ ನಿವೃತ್ತ ಶಿಕ್ಷಕ ದಂಪತಿ ಕೇವಲ ಒಂದೇ ಗಂಟೆ ಅಂತರದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಭಾಗ್ಯನಗರದ ನಿವಾಸಿಗಳಾಗಿದ್ದ ಗುರುರಾಜ ಅಧ್ಯಾಪಕ (89) ಹಾಗೂ ಅಲಕಾ ಅಧ್ಯಾಪಕ (85) ಇಬ್ಬರೂ ನಿನ್ನೆ ರಾತ್ರಿ ನಿಧನರಾದರು.

ಗುರುರಾಜ ಅಧ್ಯಾಪಕ ರಾತ್ರಿ 10.15ರ ಹೊತ್ತಿಗೆ ಸಾವಿಗೀಡಾದರೆ, ಪತ್ನಿ ಅಲಕಾ ರಾತ್ರಿ 11 ಗಂಟೆ ವೇಳೆಗೆ ನಿಧನರಾದರು. ಗುರುರಾಜ ಸರಸ್ವತಿ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರೆ, ಅಲಕಾ ಗೊಮಟೇಶ್ ಹೈಸ್ಕೂಲ್ ನಲ್ಲಿ ಸೇವೆ ಸಲ್ಲಿಸಿದ್ದರು.

ಸುಮಾರು 60 ವರ್ಷ ಅವರು ದಾಂಪತ್ಯ ಜೀವನ ನಡೆಸಿದ್ದರು. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಗುರುರಾಜ ಅಧ್ಯಾಪಕ ಹಲವಾರು ಕೃತಿಗಳನ್ನು ರಚಿಸುವ ಮೂಲಕ ಸಾಹಿತಿಯಾಗಿಯೂ ಪರಿಚಿತರಾಗಿದ್ದರು.

ದಂಪತಿ ಒಂದೇ ದಿನ ಮೃತರಾದ ಸುದ್ದಿ ತಿಳಿದು ಅವರು ಅಭಿಮಾನಿಗಳು, ಶಿಷ್ಯರು, ಸುತ್ತಲಿನ ಜನರು ಮಡತ ದೇಹದ ದರ್ಶನ ಪಡೆದರು. ಅಕ್ಕಪಕ್ಕದವರು ಅವರ ಗುಣಗಾನ ಮಾಡುತ್ತಿದ್ದಾರೆ.

Home add -Advt

Related Articles

Back to top button