Kannada News

ಕೊನವಾಳ ಗಲ್ಲಿ ನಾಲಾ ಪರಿಶೀಲಿಸಿದ ಶಾಸಕ ಅನಿಲ ಬೆನಕೆ

ಕೊನವಾಳ ಗಲ್ಲಿ ನಾಲಾ ಪರಿಶೀಲಿಸಿದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಶಾಸಕ ಅನಿಲ ಬೆನಕೆ ನಗರದಲ್ಲಿ ಸುರಿಯುತ್ತಿರುವ ಅತಿಯಾದ ಮಳೆಯಿಂದಾಗಿ ಕೊನವಾಳ ಗಲ್ಲಿಯಲ್ಲಿನ ನಾಲಾ ಕಾಂಪೌಂಡ ಕುಸಿದು ಬಿದ್ದು ನಾಲಾದಲ್ಲಿನ ನೀರು ಹತ್ತಿರದ ಮನೆಗಳಿಗೆ ನುಗ್ಗಿರುವ ವಿಷಯ ತಿಳಿದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕೊನವಾಳ ಗಲ್ಲಿ ಜನರೊಂದಿಗೆ ಸ್ಪದಿಸಿದ ಅವರು ಅಲ್ಲಿನ ಮನೆಗಳ ಪರಿಸ್ಥಿತಿಯನ್ನು ಮನಗಂಡು ಆಡಳಿತದ ವೈಫಲ್ಯದಿಂದ ಬೆಳಗಾವಿಯ ಪ್ರಮುಖ ನಾಲೆಗಳಲ್ಲಿ ಒಂದಾದ ಕೊನವಾಳ ಗಲ್ಲಿ ನಾಲಾ ಕಾಮಗಾರಿಯನ್ನು ನಿರ‍್ಲಕ್ಷಿಸಲಾಗಿದ್ದು ಇದರಿಂದ ಇಂದು ನಾಲಾ ಕಂಪೌಂಡ್ ಕುಸಿದಿದ್ದು ಅದರ ನೀರು ಕೊನವಾಳ ಗಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನುಗ್ಗಿದೆ ಎಂದರು.

ನಂತರದಲ್ಲಿ ಸ್ಥಳಕ್ಕೆ ಬಂದ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಶಾಸಕರು ತಕ್ಷಣ ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ನಂತರ ಮಾತನಾಡಿದ ಶಾಸಕರು ಮುಂದಿನ ದಿನಗಳಲ್ಲಿ ನಗರದಲ್ಲಿನ ಎಲ್ಲ ನಾಲಾಗಳನ್ನು ಸ್ವಚ್ಚವಾಗಿಸಿ ದುರಸ್ಥಿಗೊಳಿಸಬೇಕಾದ ನಾಲೆಗಳನ್ನು ದುರಸ್ಥಿಗೊಳಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳು ಹಾಗೂ ಅಲ್ಲಿನ ಸಾರ‍್ವಜನಿಕರು ಉಪಸ್ಥಿತರಿದ್ದರು.///

Home add -Advt

Related Articles

Back to top button