Kannada NewsKarnataka NewsPolitics

ಇನ್ನೂ ಹೆಚ್ಚು ಮಳೆಯಾಗಲಿ: ಡಿಕೆ ಶಿವಕುಮಾರ ಪ್ರಾರ್ಥನೆ

ಪ್ರಗತಿವಾಹಿನಿ ಸುದ್ದಿ: ಇಷ್ಟು ದಿನಗಳ ಬರದಿಂದ ಜನರು ತತ್ತರಿಸಿದ್ದು ಇದೀಗ ಮಳೆ ಸುರಿಯುತ್ತಿರುವುದು ಒಳ್ಳೆಯದು. ಮಳೆ ಬರಲಿ, ಇನ್ನೂ ಹೆಚ್ಚು ಮಳೆ  ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನಗಳ ಬರದಿಂದ ಜನರು ತತ್ತರಿಸಿದ್ದು ಇದೀಗ ಮಳೆ ಸುರಿಯುತ್ತಿರುವುದು ಒಳ್ಳೆಯದು. ಇನ್ನು ಮಳೆಯಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಲಾಗುವುದು ಎಂದರು. 

Home add -Advt

ನಿನ್ನೆ ಸುರಿದ ಮಳೆಯಿಂದ ಬೆಂಗಳೂರಿನಲ್ಲಿ ಅವಾಂತರಗಳು ಸೃಷ್ಟಿಯಾಗಿದೆ.  ಮಳೆಯಿಂದ ಎಲ್ಲೆಲ್ಲಿ ಸಮಸ್ಯೆ ಆಗಿದೆ ಬಗೆಹರಿಸುವ ಕೆಲಸ ಮಾಡುತ್ತೇವೆ. ಇಂದು ಪದವೀಧರ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮೇಲ್ಮನೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಾರ್ಯವಿದೆ. ಇದು ಮುಗಿದು ಬಳಿಕ ಮಳೆಯಿಂದ ಉಂಟಾದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಹಾಗೂ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Related Articles

Back to top button