Kannada NewsKarnataka NewsPolitics

ಕೆಎಲ್ಇ ಬಿಬಿಎ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹುಬ್ಬಳ್ಳಿಯ ಜೈನ್ ಕಾಲೇಜಿನಲ್ಲಿ ಏರ್ಪಡಿಸಿದ್ದ ವ್ಯವಸ್ಥಾಪನ ಸ್ಪರ್ಧೆ ಕ್ಯಾವಲಕೇಡ -೨೦೧೯ ರಲ್ಲಿ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಬಿಬಿಎ ಮಹಾವಿದ್ಯಾಲಯವು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದು ಕೊಂಡಿದೆ.

ಯಶ್ವಿ ಖೊಡಾ ಅವರು ಸಾರಿಗೆ ಹಾಗು ಸೌಕರ‍್ಯ ವಿಭಾಗದಲ್ಲಿ ಪ್ರಥಮ, ಜ್ಯೋತಿ ಶಿರಾಳಕರ ಅವರು ಮಾನವ ಸಂಪನ್ಮೂಲ ಇಲಾಖೆ ವಿಭಾಗದಲ್ಲಿ ಪ್ರಥಮ, ಶುಭಮ್ ಹಬಿಬ್ ಅವರು ಹಣಕಾಸು ಇಲಾಖೆ ವಿಭಾಗದಲ್ಲಿ ಪ್ರಥಮ ಮತ್ತು ನೊಮಾನ ಸಯೈದ್ ಅವರು ವಿದೇಶಾಂಗ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಸಮಗ್ರ ವೀರಾಗ್ರಣಿ ಪಡೆದುಕೊಂಡಿರುವುದಕ್ಕೆ ಪ್ರೊ. ಪಿ.ಆರ್. ಕಡಕೋಳ ಹಾಗೂ ಪ್ರಾಧ್ಯಾಪಕ ವೃಂದವು ಅಭಿನಂದಿಸಿದೆ.

Home add -Advt

Related Articles

Back to top button