Latest

ಖಾತೆ ಸಸ್ಪೆನ್ಸ್; ಮಧ್ಯರಾತ್ರಿ ನಂತರವೂ ಮುಗಿಯದ ಕಸರತ್ತು; ಶನಿವಾರ ಹಂಚಿಕೆ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನೂತನ ಸಚಿವರಿಗೆ ಖಾತೆ ಹಂಚುವ ಕೆಲಸ ಶುಕ್ರವಾರ ಸಾಧ್ಯವಾಗಲಿಲ್ಲ. ತುಮಕೂರಿನಿಂದ ವಾಪಸ್ ಬಂದ ಬಳಿಕ ಮಧ್ಯರಾತ್ರಿಯ ನಂತರವೂ ಖಾತೆ ಹಂಚಿಕೆ ಕಸರತ್ತು ನಡೆದರೂ ಅದನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ.

ಶುಕ್ರವಾರ ರಾತ್ರಿಯೇ ಖಾತೆ ಹಂಚಿಕೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗ್ಗೆ ಬೆಂಗಳೂರಿನಲ್ಲಿ ಹೇಳಿದ್ದರು.  ರಾತ್ರಿ ತುಮಕೂರಿನಿಂದ ಹೊರಡುವಾಗ ಸಹ ಬೆಂಗಳೂರಿಗೆ ವಾಪಸ್ಸಾದ ತಕ್ಷಣ ಖಾತೆ ಹಂಚಿಕೆ ಮಾಡುವುದಾಗಿ ಹೇಳಿದ್ದರು.

ಆದರೆ ಅವರು ಬೆಂಗಳೂರಿಗೆ ವಾಪಸ್ಸಾಗುವ ಹೊತ್ತಿಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಪ್ರತಾಪ ಗೌಡ ಪಾಟೀಲ, ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಟಳ್ಳಿ ಆಗಮಿಸಿದ್ದರು. ಅವರೊಂದಿಗೆ ಮಾತನಾಡದ ನಂತರ ಖಾತೆ ಹಂಚಿಕೆ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಹಾಗಾಗಿ ಶನಿವಾರ ಬೆಳಗ್ಗೆ ಖಾತೆ ಪಟ್ಟಿಯನ್ನು ರಾಜ್ಯಪಾಲರಿಗೆ ಕಳಿಸಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ. ಶನಿವಾರ ಮಧ್ಯಾಹ್ನದ ಹೊತ್ತಿಗೆ ಖಾತೆ ವಿವರ ಪ್ರಕಟವಾಗಬಹುದು.

Home add -Advt

ಬೊಮ್ಮಾಯಿ ನಿವಾಸಕ್ಕೆ ಬಂದ ಬಾಲಚಂದ್ರ ಜಾರಕಿಹೊಳಿ, ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ

Related Articles

Back to top button