Karnataka NewsPolitics

*ಪರಿಸರ ದಿನಾಚರಣೆಗೆ ವಿಶೇಷ ಘೋಷಣೆ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಉತ್ತಮ ಬೆಂಗಳೂರಿಗಾಗಿ ನಮ್ಮ ಹಸಿರು ಪ್ರಾಮುಖ್ಯತೆ ನೀಡಬೇಕು. ನಾವು ಸಾವಿರಾರು ಎಲೆಕ್ಟಿಕ್ ಬಸ್‌ಗಳನ್ನು ಪ್ರಾರಂಭಿಸಿದ್ದೇವೆ. ಜೂನ್ 6 ರಂದು ನಾನು ಸ್ವಚ್ಛ ಬೆಂಗಳೂರು ಎಂಬ ಧೈಯ ವಾಕ್ಯ ಘೋಷಿಸುತ್ತಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. 

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲು ಅಗತ್ಯ ಕ್ರಮ ಮುಖ್ಯ ಹೀಗಾಗಿ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ನಾವು ಸಹ ಕ್ರಮವನ್ನು ಕೈಗೊಂಡಿದ್ದೇವೆ. ಬೆಂಗಳೂರಿನ ನದಿ, ರಾಜಕಾಲುವೆಗಳ ಸುತ್ತ ಬೇಲಿ ಹಾಕಲು 38 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಇಡಲಾಗಿದೆ ಸದ್ಯದಲ್ಲೇ ಬೇಲಿ ಹಾಕುವ ಕಾರ್ಯ ನಡೆಸಲಾಗುತ್ತದೆ ಎಂದು ಡಿಕೆ ಹೇಳಿದರು.

Home add -Advt

ಹಸಿರು ಬೆಂಗಳೂರಿಗೆ ಎಲ್ಲಾ ಸಂಸ್ಥೆಗಳು, ಎಜುಕೇಷನ್ ಸಂಸ್ಥೆಗಳಿಗೆ ಭಾಗಿಯಾಗುವಂತೆ ಸ್ವಾಗತಿಸುತ್ತೇನೆ. ಇವೆಲ್ಲವನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಲಾಗುತ್ತದೆ. ಮಕ್ಕಳು ಕೂಡ ಕಾರ್ಯಕ್ರಮದಲ್ಲಿ ಮಕ್ಕಳು ಭಾಗಿಯಾಗಿ ಸಸಿ ನೆಡುವ ಮೂಲಕ ಪರಿಸರ ದಿನವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಶಿವಕುಮಾ‌ರ್ ತಿಳಿಸಿದರು.

Related Articles

Back to top button