Latest

ಕಾವೇರಿ, ಕೃಷ್ಣಾ ಸೇರಿ ಒಟ್ಟು 11 ಜನ ಸಿಬ್ಬಂದಿಗೆ ಸೋಂಕು ದೃಢ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರಿ ಪದ್ಮಾವತಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಇದೀಗ ಸಿಎಂ ಕಾವೇರಿ ನಿವಾಸದಲ್ಲಿ ನಾಲ್ವರಿಗೆ ಹಾಗೂ ಗೃಹ ಕಚೇರಿ ಕೃಷ್ಣಾದಲ್ಲಿ 7 ಜನ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಕಾವೇರಿ, ಕೃಷ್ಣಾ ಸೇರಿ ಒಟ್ಟು 11 ಜನ ಸಿಬ್ಬಂದಿಗೆ ಸೋಂಕು ತಗುಲಿದೆ.

ಕಾವೇರಿ ನಿವಾಸದಲ್ಲಿ ಅಡುಗೆ ಭಟ್ಟ ಹಾಗೂ ಮೂವರು ಮನೆ ಕೆಲಸದವರಿಗೆ ಸೋಂಕು ತಗುಲಿದೆ. ಅಲ್ಲದೆ ಸಿಎಂ ಗನ್ ಮ್ಯಾನ್, ವಿಶೇಷ ಕರ್ತವ್ಯಾಧಿಕಾರಿ ಕಾರ್ ಚಾಲಕ ಸೇರಿ ಗೃಹ ಕಚೇರಿ ಕೃಷ್ಣಾದಲ್ಲಿ ಒಟ್ಟು 7 ಜನರಿಗೆ ಇಂದು ಕೊರೊನಾ ಪಾಸಿಟೀವ್ ಬಂದಿದೆ.

ಎಲ್ಲ ಸಿಬ್ಬಂದಿಯನ್ನು ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ಗೆ ಶಿಫ್ಟ್ ಮಾಡಲಾಗುತ್ತಿದೆ. ಎಲ್ಲರಿಗೂ ಅಲ್ಲೇ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಸಿಎಂ ಮನೆ ಹಾಗೂ ಕಚೇರಿಗೆ ಸ್ಯಾನಿಟೈಸ್ ಮಾಡಲಾಗಿದೆ.

Home add -Advt

Related Articles

Back to top button