
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಪ್ರಕಟಿಸಿದ್ದು, ಜ್ಞಾನಭಾರತಿ ಕೃಷ್ಣಮೂರ್ತಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಿಎಂ.ಹೆಚ್.ಡಿ.ಕುಮಾರಸ್ವಾಮಿ, ಜ್ಞಾನಭಾರತಿ ಕೃಷ್ಣಮೂರ್ತಿ ನಮ್ಮ ಕಾರ್ಯಕರ್ತ. ತಮ್ಮ ಸ್ವಂತ ದುಡಿಮೆಯಿಂದ ಮೇಲೆ ಬಂದಿದ್ದಾರೆ. ನಿಷ್ಠಾವಂತ ಕಾರ್ಯಕರ್ತರಾಗಿರುವುದರಿಂದ ಆರ್.ಆರ್.ನಗರ ಜೆಡಿಎಸ್ ಟಿಕೆಟ್ ಕೃಷ್ಣಮೂರ್ತಿಯವರಿಗೆ ನೀಡಲಾಗಿದೆ. ನಾಳೆ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ಇನ್ನು ಮುನಿರತ್ನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಕೂಡ ಸಿನಿಮಾರಂಗದ ಹಿನ್ನೆಲೆ ಹೊಂದಿದ್ದೇನೆ. ಮುನಿರತ್ನ ಕೂಡ ಸಿನಿಮಾರಂಗದಿಂದ ಬಂದವರು. ಸಿನಿಮಾರಂಗದಲ್ಲಿ ನಾವಿಬ್ಬರು ಸ್ನೇಹಿತರು. ಆದರೆ ಸಿನಿಮಾರಂಗವೇ ಬೇರೆ, ರಾಜಕೀಯ ರಂಗವೇ ಬೇರೆ ಎಂದು ಹೇಳಿದರು.