
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ:ಬೇರೆ ಕೆಲಸಗಳ ಒತ್ತಡ ಎಷ್ಟಿದ್ದರೂ ಫೋನ್ ಇನ್ ಮೂಲಕ ಜನರ ಸಮಸ್ಯೆ ಆಲಿಸುವ ಪರಿಪಾಠ ಮುಂದುವರೆಸಿರುವ ಬೆಳಗಾವಿ ಎಸ್‍ಪಿ ಡಾ. ಸಂಜೀವ್ ಪಾಟೀಲ್ ಅವರ ಕಾಯಕ ನಿಷ್ಠೆಗೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಳಗಾವಿಯಲ್ಲಿ ನಡೆದ ರಾಜ್ಯ ವಿಧಾನ ಮಂಡಲಗಳ ಅಧಿವೇಶನದ ಸಂದರ್ಭದಲ್ಲೂ ಸಹ ಎಸ್‍ಪಿ ಫೋನ್ ಇನ್ ಕಾರ್ಯಕ್ರಮ ನಡೆಸಿ ಗಮನ ಸೆಳೆದಿದ್ದರು. ಶನಿವಾರ (ಜ.14) ಸಂಕ್ರಾಂತಿ ಹಬ್ಬದಂದೂ ಸಹ ಫೋನ್ ಇನ್ ಕಾರ್ಯಕ್ರಮ ನಡೆಸಿದರು.
ಬೆಳಗಾವಿ ನಗರ ಮತ್ತು ಜಿಲ್ಲೆಯ ವಿವಿಧೆಡೆಗಳಿಂದ ಒಟ್ಟು 53 ಜನ ಫೋನ್ ಮಾಡಿ ದೂರು ಹೇಳಿಕೊಂಡರು.
ಬಾರ್‍ಗಳ ನಿಗದಿತ ವೇಳೆ ಪಾಲನೆ ಮಾಡದಿರುವ ಕುರಿತು ನಿಪ್ಪಾಣಿಯಿಂದ, ಕುವಳ್ಳಿಯಿಂದ ಕೌಟುಂಬಿಕ ಕಲಹದ ಕುರಿತು, ರಾಮದುರ್ಗದಿಂದ ಆರೋಪಿ ಪತ್ತೆ ಹಚ್ಚುವ ಕುರಿತು, ಅವರಾದಿಯಿಂದ ನಕಲಿ ಪತ್ರಕರ್ತನ ದೌರ್ಜನ್ಯ ತಡೆಯುವ ಬಗ್ಗೆ,
ಮುನವಳ್ಳಿಯಿಂದ ನವಿಲುತೀರ್ಥ ಜಲಾಶಯಕ್ಕೆ ಮೂಲ ಸೌಕರ್ಯ ಒದಗಿಸುವ ಬಗ್ಗೆ, ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಒಟ್ಟು 35 ಕರೆಗಳು ಬಂದವು.
ಬೆಳಗಾವಿ ನಗರ ಪೊಲೀಸ್ ಇಲಾಖೆಯ ವ್ಯಾಪ್ತಿಯ ಧಾಮಣೆಯಿಂದ ರಸ್ತೆ ಅತಿಕ್ರಮಣ ತೆರವುಗೊಳಿಸುವ ಬಗ್ಗೆ, ವಡಗಾವಿಯಿಂದ ಅನಧೀಕೃತ ರಿಕ್ಷ ನಿಲುಗಡೆ ತೆರವುಗೊಳಿಸುವ ಬಗ್ಗೆ ಸೇರಿದಂತೆ ವಿವಿಧೆಡೆಗಳಿಂದ ಒಟ್ಟು 18 ಕರೆಗಳು ಬಂದವು.
ಗದಗದಿಂದ ಅಕ್ರಮ ಮರಳು ಸಾಗಣೆ ಬಗ್ಗೆ ಮತ್ತು ತುಮಕೂರು ಜಿಲ್ಲೆಯಿಂದ ಜಮೀನು ವಿವಾದದ ಕುರಿತು ದೂರು ಬಂದವು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಲ್ಲ ಕರೆಗಳನ್ನು ಸ್ವೀಕರಿಸಿದ ಎಸ್‍ಪಿ ಸಂಜೀವ್ ಪಾಟೀಲ್ ದೂರು ಹೇಳಿಕೊಂಡವರಿಗೆ ಅಗತ್ಯ ಕ್ರಗಳನ್ನು ಕೈಗೊಳ್ಳುವ ಭರವಸೆ ನೀಡಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ಇನ್ಸ್‍ಪೆಕ್ಟರ್‍ಗಳಾದ ಬಿ. ಆರ್. ಗಡ್ಡೇಕರ್, ಶರಣಬಸಪ್ಪ ಅಜೂರ, ಮಹಾದೇವ ಎಸ್. ಎಂ., ಬಾಳಪ್ಪ ತಳವಾರ, ವಿಠ್ಠಲ ಮಾದರ ಮೊದಲಾದವರು ಪಾಲ್ಗೊಂಡಿದ್ದರು.
ಬೆಳಗಾವಿ ವಲಯ ಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ ಸಂಪನ್ನ