Kannada NewsKarnataka NewsLatest

ಅಹವಾಲು ಆಲಿಸಿ, ಜನರಿಗೆ ಅಭಯ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್​   

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ​ವಿವಿಧ ಭಾಗಗಳ ಜನರ ​ಅಹವಾಲುಗಳನ್ನು ಆಲಿಸಿ, ಸಮಸ್ಯೆಗಳ ಕುರಿತು ಸ್ಪಂದಿಸಿದರು.
ಮಾರ್ಕಂಡೇಯ ನಗರ, ಚಂದನಹೊಸೂರ, ಬೆಕ್ಕಿನಕೇರಿ​, ಗೆಜಪತಿ​ ಮೊದಲಾದ​ ಗ್ರಾಮಗಳ ಸ್ಥಳೀಯ ಸಮಸ್ಯೆಗಳ ಬಗ್ಗೆ ಹಾಗೂ ಈಗಾಗಲೇ ಅಭಿಪಡಿಸಿದ ದೇವಸ್ಥಾನಗಳ, ರಸ್ತೆಗಳ ಹಾಗೂ ಇನ್ನಿತರ ಕೆಲಸಗಳ ಬಗ್ಗೆ ​ ಸಾರ್ವಜನಿಕರೊಂದಿಗೆ ಲಕ್ಷ್ಮಿ ಹೆಬ್ಬಾಳಕರ್ ಚರ್ಚಿಸಿದರು. 
ಹಂತ ಹಂತವಾಗಿ ಕ್ಷೇತ್ರದ ಎಲ್ಲ ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿದ್ದು, ಯಾ​ವುದೇ ಕೆಲಸಗಳು​ ಬಾಕಿ ಉಳಿಯದಿರುವ ಹಾಗೇ ನೋಡಿಕೊಳ್ಳುತ್ತಿದ್ದೇನೆ. ನನ್ನ ಗಮನಕ್ಕೆ ಬಂ​ದ​ ಎಲ್ಲ ಕೆಲಸಗಳ​ನ್ನು ಆದ್ಯತೆಯ ಮೇಲೆ ಮಾಡುತ್ತಿದ್ದೇನೆ. ತ್ವರಿತಗತಿಯಲ್ಲಿ ಅಭಿವೃದ್ದಿ ಕೆಲಸಗಳಿಗೆ ಸ್ಪಂದಿಸುತ್ತಿದ್ದೇನೆ​. ಕ್ಷೇತ್ರದ ಜನರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದಗಳ ಫಲದಿಂದ ಕ್ಷೇತ್ರವನ್ನು ಮುನ್ನಡೆಸುತ್ತಿದ್ದೇನೆ​ ಎಂದು ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು. ​
ಏನೇ ಸಮಸ್ಯೆಗಳಿದ್ದರೂ ಬಂದು ಚರ್ಚಿಸಿ. ಯಾರೂ ಹಿಂಜರಿಯುವ ಅಗತ್ಯವಿಲ್ಲ. ಕ್ಷೇತ್ರದ ಜನರಿಗೆ ನಾನು ಸದಾ ಲಭ್ಯವಿರುತ್ತೇನೆ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಶಾಸಕರು ಅಭಯ ನೀಡಿದರು. 

Related Articles

Back to top button