Karnataka News

*ಮಲಗಿದ್ದಲ್ಲಿಯೇ ಹೃದಯಾಘಾತ: ಗ್ರಾಮ ಲೆಕ್ಕಿಗ ಸಾವು*

ಪ್ರಗತಿವಾಹಿನಿ ಸುದ್ದಿ: ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಗ್ರಾಮ ಲೆಕ್ಕಿಗರೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ನಡೆದಿದೆ.

ಮಾಧವ್ ರಾವ್ (53) ಮೃತ ದುರ್ದೈವಿ. ಮನೆಯಲ್ಲಿ ರಾತ್ರಿ ಮಲಗಿದ್ದವರು ಬೆಳಿಗ್ಗೆ ಎದ್ದಿಲ್ಲ. ಮನೆಯವರು ಗಾಬರಿಯಾಗಿ ನೋಡಿದಾಗ ಹೃದಘಾತದಿಂದ ಸಾವನ್ನಪ್ಪಿರುವುದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳು, ಯುವಕರು, ಮಹಿಳೆಯರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

Home add -Advt

Related Articles

Back to top button