Kannada NewsKarnataka NewsLatest

ನೇಜ ಗ್ರಾಮದಲ್ಲಿ  ಹನುಮಾನ್ ಮಂದಿರ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ತಾಲೂಕಿನ ನೇಜ ಗ್ರಾಮದಲ್ಲಿ ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಹನುಮಾನ್ ಮಂದಿರವನ್ನು ಶಾಸಕ ಗಣೇಶ ಹುಕ್ಕೇರಿ ಗುರುವಾರ ಭಕ್ತರಿಗೆ ಅರ್ಪಿಸಿದರು.
 ಸಂಕೇಶ್ವರ​ದ​​ ಶ್ರೀ ಮ​ದ್​ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಮಠ​ದ​ ಶ್ರೀ​ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳ ಸಾನಿಧ್ಯದಲ್ಲಿ ಹನುಮಾನ್ ದೇವಸ್ಥಾನದ ವಾಸ್ತುಶಾಂತಿ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ನಡೆದವು.
ಮಾಜಿ ಸಚಿವರೂ ಮಾಜಿ ಸಂಸದರೂ ಆಗಿರುವ ಪ್ರಕಾಶ ಹುಕ್ಕೇರಿ ಅವರ ಪ್ರಯತ್ನದಿಂದ ನೇಜ ಗ್ರಾಮದ ಜನರ ಬಹು ಅಪೇಕ್ಷೆಯಂತೆ ಹನುಮಾನ್ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.
ದೇವಸ್ಥಾನಗಳ ನಿರ್ಮಾಣದಿಂದ ಗ್ರಾಮದ ಚಿತ್ರಣವೇ ಬದಲಾಗಲಿದೆ. ಜನರಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಜನರೆಲ್ಲ ಒಗ್ಗಟ್ಟಿನಿಂದ ದೇವರ ಸೇವೆ ಮಾಡುತ್ತ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಗಣೇಶ ಹುಕ್ಕೇರಿ ಕರೆ ನೀಡಿದರು.

​ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ಶಾಸಕ

ನೇಜ ಗ್ರಾಮದಲ್ಲಿ ಹನುಮಾನ್ ಮಂದಿರ ಉದ್ಘಾಟಿಸಿದ ಶಾಸಕ ಗಣೇಶ ಹುಕ್ಕೇರಿ ನೆಲದ ಮೇಲೆಯೇ ಕುಳಿತು ಊಟ ಮಾಡುತ್ತಿರುವುದು
ಹನುಮಾನ್ ಮಂದಿರ ಉದ್ಘಾಟನೆಯ ನಂತರ ಮಹಾಪ್ರಸಾದ ವಿತರಣೆ ನಡೆಯಿತು. ಶಾಸಕ ಗಣೇಶ ಹುಕ್ಕೇರಿ ಎಲ್ಲ ಭಕ್ತರೊಂದಿಗೆ ನೆಲದ ಮೇಲೆಯೇ ಕುಳಿತು ಸಾಮಾನ್ಯ ಜನರಂತೆ ಪ್ರಸಾದ ಸೇವಿಸಿದರು. ದೇವರ ಸನ್ನಿಧಿಯಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸಿದ ಶಾಸಕರು, ಗ್ರಾಮಸ್ಥರೊಂದಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದರು. ​

 

 ​ 
​ 

Home add -Advt

Related Articles

Back to top button