ಪ್ರಗತಿವಾಹಿನಿ ಸುದ್ದಿ, ಅಗಸಗಿ
ಕಡೋಲಿ ಗ್ರಾಮದಲ್ಲಿ ಕೊನೆಗೂ ಮನೆಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.
ನೋಟಿಸ್ ನೀಡಿ ಒಂದೇ ದಿನದಲ್ಲಿ ಮನೆ ಬಿಡುವಂತೆ ಆದೇಶಿಸಿದ ಪಿ ಡಬ್ಲೂಡಿ
ನೂರಾರು ಪೊಲೀಸರ ಬಲದೊಂದಿಗೆ ಲೋಕೋಪಯೋಗಿ ಇಲಾಖೆ ಬಲಾತ್ಕಾರವಾಗಿ ಮನೆಗಳ ತೆರವು ಕಾರ್ಯಾಚರಣೆ ಶುರು ಮಾಡಿದೆ. ನೂರಾರು ವರ್ಷಗಳಿಂದ ಮನೆ ಕಟ್ಟಿಕೊಂಡಿರುವವರಿಗೆ ಕೇವಲ ಒಂದೇ ದಿನದಲ್ಲಿ ಮನೆಗಳನ್ು ತೆರವು ಮಾಡುವಂತೆ ನೊಟೀಸ್ ನೀಡಿದ್ದ ಇಲಾಖೆ, ಇಂದು ಬೆಳಗ್ಗೆ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ, ತೆರವು ಕಾರ್ಯಾಚರಣೆ ಆರಂಭಿಸಿದೆ.
ಈ ಮಧ್ಯೆ 12 ಮನೆಗಳವರು ನ್ಯಾಯಾಲಯದಿಂದ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮದಲ್ಲಿ ಸಧ್ಯ ಆತಂಕದ ವಾತಾವರಣ ನಿರ್ಮಾಣವಾಗಿದೆ.