Latest

*ಗೃಹಲಕ್ಷ್ಮೀ ಹಣದಿಂದ ಪತಿಗೆ ಕಣ್ಣಿನ ಆಪರೇಷನ್‌ ಮಾಡಿಸಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯಿಂದ ಬಂದಂತಹ ಹಣದಿಂದ ಮಹಿಳೆಯೊಬ್ಬರು ತಮ್ಮ ಪತಿಗೆ ನೇತ್ರ ಆಪರೇಷನ್‌ ಮಾಡಿಸಿ, ಸಿಎಂ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.

ಬೆಳಗಾವಿ ನಗರದ ಅನಗೋಳದ ನಿವಾಸಿ ಅನಿತಾ ಬಡಿಗೇರ ಎಂಬುವರು ತಮ್ಮಪತಿ ಚಂದ್ರಶೇಖರ ಅವರಿಗೆ ನೇತ್ರ ಸಮಸ್ಯೆ ಇದ್ದಿದ್ದರಿಂದ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಅವರ ಪತಿಯ ನೇತ್ರ ಆಪರೇಷನ್ ಮಾಡಿಸಿದ್ದಾರೆ. ಪ್ರತಿ ತಿಂಗಳಿಗೆ ಬರುವ 2 ಸಾವಿರ ಹಣವನ್ನು ಕೂಡಿಟ್ಟು ಒಟ್ಟು 18 ಸಾವಿರಕ್ಕೆ ಮತ್ತೆ 10 ಸಾವಿರ ಸೇರಿಸಿ ಪತಿಯ ನೇತ್ರ ಅಪರೇಷನ್ ಮಾಡಿದ್ದಾರೆ.

ನೇತ್ರದ ಸಮಸ್ಯೆಯಿಂದ ಬಳಲುತ್ತಿದ್ದ ಪತಿಯ ಅಪರೇಷನ್‌ಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅನಿತಾ ಬಡಿಗೇರ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಯೋಜನೆಗಳು ಬಡ ಜನರಿಗೆ ಸಾಕಷ್ಟು ನೆರವಾಗಿದ್ದು, ನಿಮ್ಮ ಸರ್ಕಾರ ನಿರಂತರ 10 ವರ್ಷ ಪೂರೈಸಲಿ ಎಂದು ಅನಿತಾ ಅವರು ಆಶೀರ್ವಾದ ಮಾಡಿದ್ದಾರೆ.

ಬದುಕಿಗೆ ಬೆಳಕಾದ ಗೃಹಲಕ್ಷ್ಮಿ:

Home add -Advt

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿಯೋಜನೆ ರಾಜ್ಯದ ಮಹಿಳೆಯರಿಗೆ ಸಾಕಷ್ಟು ಉಪಯೋಗವಾಗುತ್ತಿದ್ದು ಅನೇಕರು ಜೀವನ ಮಟ್ಟ ಸುಧಾರಿಸಲು ಇದು ನೆರವಾಗಿದೆ. ಕಳೆದ ಒಂದು ವರ್ಷದಿಂದ ಸರ್ಕಾರದಿಂದ ಬರುತ್ತಿರುವ ಉಚಿತ ಯೋಜನೆಗಳು ಹಾಗೂ ಗೃಹಲಕ್ಷ್ಮಿ ಯೋಜನೆ ಜೀವನ ನಡೆಸಲು ನೆರವಾಗುತ್ತಿದ್ದು, ರಾಜ್ಯದ ಮಹಿಳೆಯರು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಧನ್ಯವಾದ ತಿಳಿಸುತ್ತಿದ್ದಾರೆ.

Related Articles

Back to top button