Kannada NewsKarnataka News

ಸೋಮಪ್ಪ ಕೇತನ್ನವರ ನಿಧನ

ಸೋಮಪ್ಪ ಕೇತನ್ನವರ ನಿಧನ

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು-
ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಜಾನಪದ ಕಲಾವಿದ, ಕುಸ್ತಿ ಪಟು ಸೋಮಪ್ಪ ತಿಪ್ಪಣ್ಣ ಕೇತನ್ನವರ (79) ಹೃದಯಾಘಾತದಿಂದ ಬುಧವಾರ ನಿಧನರಾದರು.
ಕುಸ್ತಿ ಪಟುವಾಗಿ, ಸಂಗ್ಯಾಬಾಳ್ಯಾ ಡಬ್ಬಿನಾಟಕದ ಮಾಸ್ತರ್ ಎಂದು ಪ್ರಖ್ಯಾತಿ ಪಡೆದಿದ್ದ
ಇವರು, ಜಾನಪದ ಕಲಾವಿದರಾಗಿ, ಭಜನಾ ಮಾಸ್ತರ್ ಆಗಿ  ಜಾನಪದ ಲೋಕಕ್ಕೆ ತಮ್ಮದೇ
ಆದ ಕೊಡುಗೆ ನೀಡಿದ್ದರು.
ದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಪತ್ನಿ, ಇಬ್ಬರು ಪುತ್ರರು, ಮತ್ತು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Related Articles

Back to top button