Kannada NewsLatest

ಕಂದಾಯ ಸಚಿವ ಆರ್.ಅಶೋಕ ಸೋಮವಾರ ಬೆಳಗಾವಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕಂದಾಯ ಇಲಾಖೆಯ ಸಚಿವ ಆರ್.ಅಶೋಕ್ ಅವರು ಸೋಮವಾರ(ಅ.19) ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲಿದ್ದಾರೆ.
ಅಂದು ಮಧ್ಯಾಹ್ನ 1.20ಕ್ಕೆ ಹುಕ್ಕೇರಿ ಪಟ್ಟಣ, 1.40ಗಂಟೆಗೆ ಎಲಿಮುನ್ನೋಳಿಗೆ ಭೇಟಿ ನೀಡಲಿದ್ದಾರೆ. ಇದಾದ ಬಳಿಕ 3.10 ಗಂಟೆಗೆ ಕಲ್ಲೋಳ ಸೇತುವೆ, 3.30 ಗಂಟೆಗೆ ಯಡೂರ; ಯಡೂರವಾಡಿ ಹಾಗೂ 4.10 ಗಂಟೆಗೆ ಇಂಗಳಿ ಗ್ರಾಮದಲ್ಲಿ ಬೆಳೆಹಾನಿ ಪರಿಶೀಲಿಸಲಿದ್ದಾರೆ.
ಈಗಾಗಲೆ ಕಲ್ಯಾಣ ಕರ್ನಾಟಕಕ್ಕೆ ಭೇಟಿ ನೀಡಿದ್ದ ಅಶೋಕ, ಅಲ್ಲಿನ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಅಲ್ಲಿ ಸಂತ್ರಸ್ತರಿಗೆ ಸ್ಪಂದಿಸುವಂತೆ ಅವರು ನೀಡಿದ್ದ ಆದೇಶಕ್ಕೆ ಅಲ್ಲಿನ ಅಧಿಕಾರಿಗಳು ಯಾವುದೇ ಬೆಲೆ ನೀಡಿಲ್ಲ. ಅಶೋಕ ಹೇಳಿದಂತೆ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ವ್ಯವಸ್ಥೆಯಾಗಿಲ್ಲ. ಊಟ, ತಿಂಡ ಯಾವುದೂ ಸಮರ್ಪಕವಾಗಿಲ್ಲ.

Related Articles

Back to top button