Kannada NewsKarnataka NewsLatestTravel

*ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್*: *ಇಲ್ಲಿದೆ ಮಹತ್ವದ ಮಾಹಿತಿ*: *ಟಿಕೆಟ್ ಬುಂಕಿಂಗ್ ನಿಯಮಗಳಲ್ಲಿ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದ ಸಂದರ್ಭದಲ್ಲೇ ಭಾರತೀಯ ರೈಲ್ವೆ ಇಲಾಖೆ ಸಾಮಾನ್ಯ ಪ್ರಯಾಣಿಕರಿಗೆ ಮಹತ್ವದ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರೈಲ್ವೆ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಯಾಗುತ್ತಿವೆ.

ಇನ್ಮುಂದೆ ಆನ್‌ಲೈನ್ ರೈಲ್ವೆ ಟಿಕೆಟ್‌ಗಳಂತೆ ರೈಲ್ವೆ ನಿಲ್ದಾಣಗಳ ಕೌಂಟರ್‌ಗಳಲ್ಲಿ ಪಡೆಯುವ ಸಾಮಾನ್ಯ ಟಿಕೆಟ್‌ಗಳಿಗೂ ಪ್ರಯಾಣ ವಿಮೆ ಸೌಲಭ್ಯ ವಿಸ್ತರಣೆಯಾಗಲಿದೆ.

ಅಕ್ಟೋಬರ್ 27ರ ಒಳಗೆ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಈ ನಿಯಮಗಳು ಜಾರಿಯಾಗಲಿವೆ.

ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ. ರೈಲು ಪ್ರಯಾಣಿಕರ ಸುರಕ್ಷತೆ ಹಾಗೂ ರೈಲು ಅಪಘಾತಗಳ ತಡೆ ಕುರಿತ ಅರ್ಜಿಯ ವಿಚಾರಣೆ ವೇಳೆ ಈ ನಿರ್ಧಾರ ಹೊರಬಿದ್ದಿದೆ. ಪ್ರಸ್ತುತ ಐಆರ್‌ಸಿಟಿಸಿ ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರಿಗೆ ಮಾತ್ರ ಅತ್ಯಲ್ಪ ಶುಲ್ಕದಲ್ಲಿ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಗ್ರಾಮೀಣ ಭಾಗದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ಹೆಚ್ಚಾಗಿ ಬಳಸುವ ಕೌಂಟರ್ ಟಿಕೆಟ್‌ಗಳಿಗೆ ಈ ಸೌಲಭ್ಯ ಲಭ್ಯವಿರಲಿಲ್ಲ. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಇನ್ನು ಮುಂದೆ ಎಲ್ಲಾ ವರ್ಗದ ಪ್ರಯಾಣಿಕರಿಗೂ ಸಮಾನವಾಗಿ ಈ ಜೀವ ವಿಮಾ ಸುರಕ್ಷತೆ ದೊರೆಯಲಿದೆ.

ಅಕ್ಟೋಬರ್ 27ರಿಂದಲೇ ಈ ನಿಯಮ ಜಾರಿಗೆ ಬರುವಂತೆ ಕೌಂಟರ್‌ನಲ್ಲಿ ವಿತರಿಸಲಾಗುವ ಪ್ರತಿಯೊಂದು ಟಿಕೆಟ್‌ಗೂ ಆನ್‌ಲೈನ್ ಟಿಕೆಟ್‌ಗೆ ಸಮಾನವಾದ ವಿಮೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನು ಸುಪ್ರೀಂ ಕೋರ್ಟ್ ಮಾಡಿದೆ. ಇದರಲ್ಲಿ ಯಾವುದೇ ಲೋಪವಾದರೂ ರೈಲ್ವೆ ಮಂಡಳಿಯೇ ನೇರ ಹೊಣೆಯಾಗಲಿದೆ.

ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ನ್ಯಾಯಾಲಯ, ರೈಲ್ವೆ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ನವೆಂಬರ್ 16ರಂದು ಮಧ್ಯಾಹ್ನ 3:00 ಗಂಟೆಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 27ರ ಒಳಗೆ ಈ ವಿಮಾ ಸೌಲಭ್ಯವನ್ನು ಜಾರಿಗೆ ತರದಿದ್ದಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button