Latest

ಪುಸ್ತಕಗಳು ಮಾರ್ಗದರ್ಶನ ಮಾಡುತ್ತಾ ಹೋಗುತ್ತವೆ: ಪ್ರೇಮಚಂದ ಲೆ೦ಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಎಷ್ಟು ಒಳ್ಳೊಳ್ಳೆಯ ಪುಸ್ತಕಗಳನ್ನು ಓದುತ್ತೀರೋ ಅವು ನಿಮಗೆ ಮಾರ್ಗದರ್ಶನ ಮಾಡುತ್ತಾ ಹೋಗುತ್ತವೆ. ಅಲ್ಲದೆ ಅವುಗಳೇ ನಿಮ್ಮ ನಿಜವಾದ ಸ್ನೇಹಿತರಾಗುತ್ತವೆ. ಓದಿಗೆ ಸರಿಸಾಟಿ ಯಾವುದೂ ಇಲ್ಲ. ವಿದ್ಯಾರ್ಥಿಗಳು ಓದಿನಿಂದ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಉದ್ಯಮಿ ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಆದ ಶ್ರೀ ಪ್ರೇಮಚಂದ ಲೇಂಗಡೆ ಹೇಳಿದರು.

ಭರತೇಶ ಶಿಕ್ಷಣ ಸಂಸ್ಥೆಯ ಗ್ಲೋಬಲ್ ಬಿಸಿನೆಸ್ ಸ್ಕೂಲ್ ನ ಕರ್ಮವೀರ್ ಡಾ. ಭಾವುರಾವ್ ಪಾಟೀಲ್ ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಒಂದೇ ಪುಸ್ತಕ ಮನುಷ್ಯನಿಗೆ ಬೇರೆ ಬೇರೆ ರೀತಿಯ ಅನುಭವಗಳನ್ನು ನೀಡುತ್ತವೆ ಮತ್ತು ನಾನು ಇವತ್ತಿಗೂ ಪುಸ್ತಕಗಳನ್ನು ಕೊಳ್ಳುತ್ತೇನೆ, ಅಲ್ಲದೆ ಓದುತ್ತ ಬಂದಿದ್ದೇನೆ, ಓದಿದ ನಂತರ ಅದರಲ್ಲಿಯ ವಿಷಯವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದರಲ್ಲಿ ಸಿಗುವ ಆನಂದ ನನಗೆ ಮತ್ತ್ಯಾವುದರಲ್ಲಿಯೂ ಕಂಡಿಲ್ಲ ಎಂದು ಹೇಳಿದರು.

Home add -Advt

ಗ್ಲೋಬಲ್ ಬಿಸಿನೆಸ್ ಸ್ಕೂಲ್ ಚೇರಮನ್ ವಿನೋದ್ ದೊಡ್ಡಣ್ಣವರ ಮಾತನಾಡಿ, ಗ್ರಂಥಾಲಯ ನಡೆದು ಬಂದ ದಾರಿ ಮತ್ತು ವಿದ್ಯಾರ್ಥಿಗಳು ಪುಸ್ತಕಗಳ ಉಪಯೋಗವನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸಬೇಕು, ನೀವು ಓದಿದರೆ ಮಾತ್ರ ಮುಂದೆ ನಿಮಗೆ ಎಂತಹ ಸವಾಲುಗಳು ಬಂದರೂ ಅವುಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳ ಸಂದರ್ಶನದಲ್ಲಿ, ಗುಂಪು ಚರ್ಚೆಯಲ್ಲಿ ಹಾಗೂ ವೃತ್ತಿ ಜೀವನದಲ್ಲಿ ಪುಸ್ತಕಗಳ ಉಪಯೋಗ ತುಂಬಾ ಇದೆ ಎಂದು ಹೇಳಿದರು.

ರಾಜೀವ ದೊಡ್ಡಣ್ಣವರ ಮಾತನಾಡಿ, ಶಿಕ್ಷಣ ಸಂಸ್ಥೆಯ ವತಿಯಿಂದ ಗ್ರಂಥಾಲಯಕ್ಕೆ ಬೇಕಾದ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು ಎಂದು ಹೇಳಿದರು.

ಭರತೇಶ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ  ಪ್ರಕಾಶ ದೊಡ್ಡಣ್ಣವರ,  ಶ್ರೀಪಾಲ ಖೇಮಲಾಪುರೆ, ಭೂಷಣ ಮಿರ್ಜಿ, ಮಹಾವೀರ ಉಪಾಧ್ಯೆ,  ಅನುಪಮಾ ಶಿರಹಟ್ಟಿ, ಪ್ರಾಧ್ಯಾಪಕರಾದ ಡಾ. ಎ. ಆರ್. ರೊಟ್ಟಿ, ನಿರ್ದೇಶಕರಾದ ಡಾ. ಪ್ರಸಾದ ದಡ್ಡಿಕರ, ಸಹಾಯಕ ಗ್ರಂಥಪಾಲಕರಾದ  ಜ್ಯೋತಿ ಪಾಟೀಲ್ ಮತ್ತು ಎಲ್ಲ ಸಿಬ್ಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕರ್ಮವೀರ ಡಾ. ಭಾವುರಾವ್ ಪಾಟೀಲ್ ಗ್ರಂಥಾಲಯದ ಗ್ರಂಥಪಾಲಕರಾದ ಡಾ. ಭರತ ಭೀ ಅಲಸಂದಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.  ಸ್ವಾತಿ ಜೋಗ ಅವರು ವಂದನಾರ್ಪಣೆ ಮಾಡಿದರು. 

Related Articles

Back to top button