LatestNational

*ಇಂಡಿಗೋ ವಿಮಾನದಲ್ಲಿಯೇ ಲಾಕ್ ಆದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರು*

ಪ್ರಗತಿವಾಹಿನಿ ಸುದ್ದಿ: ದಟ್ಟ ಮಂಜು ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯವುಂಟಾಗಿದ್ದು, ರಾಜ್ಯದ ಹಲವು ಸಚಿವರು, ಶಾಸಕರು ವಿಮಾನದಲ್ಲಿಯೇ ಸಿಲುಕಿಕೊಂಡಿರುವ ಘಟನೆ ನಡೆದಿದೆ.

ವೋಟ್ ಚೋರಿ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಿದ್ದ ರಾಜ್ಯದ ಸಚಿವರು, ಶಾಸಕರು ಇಂದು ರಾಜ್ಯಕ್ಕೆ ವಾಪಾಸ್ ಆಗಲು ವಿಮಾವೇರಿ ಕುಳಿತಿದ್ದಾರೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, 21 ಶಾಸಕರು ವಿಮಾನದ ಒಳಗೆ ಲಾಕ್ ಆಗಿದೆ.

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಇಂದು ದಾವಣಗೆರೆಯಲ್ಲಿ ಅವರ ಅಂತಿಮ ದರ್ಶನ ಪಡೆಯಲು ತೆರಳಲು ಶಾಸಕರು, ಸಚಿವರು ದೆಹಲಿಯಿಂದ ಇಂಡಿಗೋ ವಿಮಾನ ಹತ್ತಿದ್ದಾರೆ. ಆದರೆ ದಟ್ಟ ಮಂಜು ಕವಿದ ವಾತಾವರಣದಿಂದಾಗಿ ವಿಮಾನ ಹಾರಾಟದಲ್ಲಿ ವಿಳಂಬವಾಗಿದೆ. ಇಂದು ಬೆಳಿಗ್ಗೆ 5:30ಕ್ಕೆ ದೆಹಲಿಯಿಂದ ಬೆಳಗಾವಿಗೆ ಹೊರಡಬೇಕಿದ್ದ ಇಂಡಿಗೋ ವಿಮಾನ ಬೆಳಿಗ್ಗೆ 10 ಗಂಟೆಯಾದರೂ ಹೊರಟಿಲ್ಲ. ವಿಮಾನವೇರಿ ಕುಳಿತಿದ್ದ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್, ಹೆಚ್.ಕೆ.ಪಾಟೀಲ್,ಶರಣಪ್ರಕಾಶ್ ಪಾಟೀಲ್ ಸೇರಿದಂತೆ 21 ಶಾಸಕರು ವಿಮಾನದೊಳಗೆ ಲಾಕ್ ಆಗಿದ್ದಾರೆ.

Home add -Advt

ದೆಹಲಿಯಲ್ಲಿ ದಟ್ಟ ಮಂಜು ಕವಿದ ವಾತಾವರಣದಿಂದಾಗಿ ಹವಾಮಾನ ವೈಪರೀತ್ಯದಿಂದಾಗಿ ಎಲ್ಲಾ ವಿಮಾನಗಳ ಟೇಕಾಫ್, ಲ್ಯಾಂಡಿಂಗ್ ನಲ್ಲಿ ವ್ಯತ್ಯಯವಾಗಿದೆ.


Related Articles

Back to top button