Latest

ಜೈಲು ಪಾಲಾಗಿದ್ದ ಕಾಳಿಚರಣ್ ಮಹಾರಾಜ್ ಗೆ ಬಿಡುಗಡೆ ಭಾಗ್ಯ

ಪ್ರಗತಿವಾಹಿನಿ ಸುದ್ದಿ; ರಾಯ್ಪುರ: ನಾಥೂರಾಮ್ ಗೋಡ್ಸೆಯನ್ನು ಹೊಗಳಿ ಜೈಲು ಸೇರಿದ್ದ ಕಾಳಿಚರಣ್ ಮಹಾರಾಜ್ ಅವರಿಗೆ ಬಿಲಾಸ್ಪುರ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ರಾಯ್ಪುರ ಧರ್ಮ ಸಂಸದ್ ನಲ್ಲಿ ಭಾಷಣ ಮಾಡಿದ ಕಾಳಿಚರಣ್ ಮಹಾರಾಜ್, ಮಹಾತ್ಮಾ ಗಾಂಧೀಜಿಯನ್ನು ಅವಹೇಳನ ಮಾಡಿದ್ದರಲ್ಲದೇ, ನಾಥೂರಾಮ್ ಗೋಡ್ಸೆಯನ್ನು ಶ್ಲಾಘಿಸಿದ್ದರು. ಈ ಪ್ರಕರಣ ಸಂಬಂಧ ರಾಯ್ಪುರ ಪೊಲೀಸರು ಬಂಧಿಸಿದ್ದರು. ದ್ವೇಷದ ಭಾಷಣ ಹಿನ್ನೆಲೆಯಲ್ಲಿ ನ್ಯಾಯಾಲಯ ಕಾಳಿಚರಣ್ ಗೆ ಜಾಮೀನು ನೀಡಲು ನಿರಾಕರಿಸಿತ್ತು. ಕಳೆದ ಮೂರು ತಿಂಗಳಿಂದ ಜೈಲುವಾಸ ಅನುಭವಿಸಿದ್ದರು.

Home add -Advt

ಅಲ್ಪಸಂಖ್ಯಾತರು ರಾಜಕೀಯದ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಇಂಥದ್ದೊಂದು ಸನ್ನಿವೇಶ ಸೃಷ್ಟಿಸಿ, ದುರಂತಕ್ಕೆ ಕಾರಣವಾಗಿದ್ದು ಮಹಾತ್ಮ ಎಂದು ಕರೆಯುವ ಮೋಹನದಾಸ್​ ಕರಮಚಂದ್ ಗಾಂಧಿ. ಅವರನ್ನು ಕೊಂದ ನಾಥೂರಾಂ ಗೋಡ್ಸೆಗೆ ನಮನಗಳು ಎಂದು ಕಾಳಿಚರಣ್ ಹೇಳಿದ್ದರು.
ಅವರವರ ಹಬ್ಬ, ಧರ್ಮಾಚರಣೆಗೆ ಸ್ವಾತಂತ್ರ್ಯವಿದೆ ಎಂದ ಸಿಎಂ

Related Articles

Back to top button