Belagavi NewsBelgaum NewsKarnataka News

*ಸಹಕಾರಿ ರಂಗ ಬಲಿಷ್ಠವಾದ ಕ್ಷೇತ್ರ: ಉಮೇಶ ಬಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಹಕಾರಿ ರಂಗದಲ್ಲಿ ಮಾಡುವ ಕೆಲಸಗಳನ್ನು ಸರ್ಕರದಿಂದಲೂ ಸಾಧ್ಯವಿಲ್ಲ ಅಷ್ಟು ಬಲಿಷ್ಠವಾದ ಕ್ಷೇತ್ರವೆ ಸಹಕಾರಿ ರಂಗ ಎಂದು ರಾಜ್ಯ ಸಹಕಾರಿ‌ ಸಂಘಗಳ ಮಹಾಮಂಡಳದ ನೂತನ ನಿರ್ದೇಶಕ ಉಮೇಶ ಬಾಳಿ ಹೇಳಿದರು.

ಬೈಲಹೊಂಗಲ ಸಮೀಪದ ಹೊಸುರ ಗ್ರಾಮದ ಮಡಿವಾಳೇಶ್ವರ ಪಿಕೆಪಿಎಸ್ ದಲ್ಲಿ ನಡೆದ ಸಾಧಕರ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಸಹಕಾರ ರಂಗದಿಂದ‌ ದಿನ ದಲಿತ ಬಡವ ಬಲ್ಲಿದ ಮತ್ತು ಕಾರ್ಮಿಕ ವರ್ಗಕ್ಕೆ ಆರ್ಥಿಕ ಸಹಾಯ ಸಹಕಾರ ನಿಡುತ್ತು ದುಡಿಯುವ ಕೈಗಳಿಗೆ ಕಾಯಕ‌ ನೀಡುವ ಮಹತ್ತರ ಕಾರ್ಯ ಸಹಕಾರ ರಂಗದಲ್ಲಿ‌ ಮಾಡಬಹುದು ಎಂದರು.

Home add -Advt

 ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಕಾಶ ಮೂಗಬಸವ ಮಾತನಾಡಿ, ಸಮಾಜದಲ್ಲಿ‌ ಜನಪರ ಕೆಲಸಗಳನ್ನು  ಮಾಡುವಾಗ ಪಕ್ಷಬೇದ ಮರೆತು ಜನ ಸೇವೆ ಮಾಡಿದಾಗ ಅದು ಜನಾರ್ದನನ ಸೇವೆಯಾಗಲಿದೆ. ಚುನಾವಣೆ ಎದುರಿಸಿದಾಗ ಪಕ್ಷದ ಚಿಹ್ನೆ ಅಡಿಯಲ್ಲಿ ಇರುತ್ತದೆ. ಪಕ್ಷದ ಚುಟುವಟಿಕೆಯಲ್ಲಿ ಪಕ್ಷಕ್ಕೆ ನಿಷ್ಠಾವಂತರಾಗಿದ್ದು ಅದನ್ನು ಮೀರಿದ ಭಾಂದವ್ಯಕ್ಕೆ ಧಕ್ಕೆ ಬರದಂತಿರಬೇಕು ಎಂದರು.

ಈ ಸಂದರ್ಭದಲ್ಲಿ ಕೇಂದ್ರ ‌ಸರ್ಕಾರದ‌ ನೈಋತ್ಯ ರೈಲ್ವೆ ವಿಭಾಗದ ಡಿ.ಆರ್.ಯು.ಸಿ.ಸಿ‌ ನಾಮನಿರ್ದೇಶನ ಸದಸ್ಯ ಎಫ್.ಎಸ್.ಸಿದ್ದನಗೌಡರ, ರಾಜ್ಯ ಸಹಕಾರ ಮಾಹಾಮಂಡಳ ಸ್ಥಾನಕ್ಕೆ  ನಿರ್ದೇಶಕರಾಗಿ ಆಯ್ಕೆಯಾದ ಉಮೇಶ ಬಾಳಿ, ಜಿಲ್ಲಾ ಕೃಷಿಕ ಸಮಾಜ ಉಪಾಧ್ಯಕ್ಷ ‌ಗುರು ಮೆಟಗುಡ್, ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷರಾದ ಕಾರ್ತಿಕ ಪಾಟೀಲ, ತಾಲೂಕಾ ಕೃಷಿಕ ಸಮಾಜ ಅಧ್ಯಕ್ಷ ‌ಉಮೇಶ ಬೋಳೆತ್ತಿನ‌ ಅವರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ‌ಮಾಜಿ‌ ನಿರ್ದೇಶಕ ಸೊಗಲ ಸೋಮೇಶ್ವರ ಟ್ರಸ್ಟ್ ಅಧ್ಯಕ್ಷ ವೀರನಗೌಡ ಸಂಗಣ್ಣವರ, ಉಪಾಧ್ಯಕ್ಷ ಕುಮಾರ ಬೋಳೆತ್ತಿನ, ಮಡಿವಾಳಪ್ಪ ಬೂದಿಹಾಳ, ಸುರೇಶ ಬಾಳೆಕುಂದರಗಿ, ನಾಗಪ್ಪ ಆರೇರ, ಮಂಜು ಪಾಟೀಲ,ಫಕೀರ ಜಡಿ, ಶಂಕರ ಹಿರುನವರ ಮುಂತಾದವರು ಇದ್ದರು. ಸಂಘದ ಸಿಈಓ ಮಂಜುನಾಥ ಪೆಂಟೇದ ಸ್ವಾಗತಿಸಿ ನಿರೂಪಿಸಿದರು. ಮೊಮಿನ ಧಪೆದಾರ ವಂದಿಸಿದರು.

Related Articles

Back to top button