Film & EntertainmentKannada NewsKarnataka NewsLatest

*ಹೊಸನಗರ ಬಸ್ ನಿಲ್ದಾಣದಲ್ಲಿ ಹೋಳಿಯಾಡಿ ಸಂಭ್ರಮಿಸಿದ ನಟಿ ಸಮಂತಾ*

ಪ್ರಗತಿವಾಹಿನಿ ಸುದ್ದಿ: ಖ್ಯಾತ ನಟಿ ಸಮಂತಾ ರುತ್ ಪ್ರಭು ಶಿವಮೊಗ್ಗ ಜಿಲ್ಲೆಯ ಹೊಸನಗರಕ್ಕೆ ಆಗಮಿಸಿದ್ದು ಹೋಳಿಯಾಡಿ ಸಂಭ್ರಮಿಸಿದ್ದಾರೆ.

Home add -Advt

ಹೊಸನಗರದ ಬಸ್ ನಿಲ್ದಾಣದಲ್ಲಿ ಸಮಂತಾ ಪತಿ ರಾಜ್ ನಿಡಿಮೋರು ಜೊತೆ ಹೋಳಿಯಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇಷ್ಟಕ್ಕು ಸಮಂತಾ ಶಿವಮೊಗ್ಗದ ಹೊಸನಗರಕ್ಕೆ ಬರಲು ಕಾರಣ ಚಿನಿಮಾ ಚಿತ್ರೀಕರಣ.

ಸಮಂತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾ ಚಿತ್ರೀಕರಣ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆಯುತ್ತಿದ್ದು, ಇಡೀ ಚಿತ್ರತಂಡ ಹೊಸನಗರದಲ್ಲಿ ಬೀಡುಬಿಟ್ಟಿದೆ.

ಚಿತ್ರೀಕರಣದ ಬಿಡುವಿನ ವೇಳೆ ಸಮಂತಾ ಚಿತ್ರತಂಡದ ಜೊತೆ ಹೋಳಿಯಾಡಿ ಹಬ್ಬವನ್ನು ಸಂಭ್ರಮಿಸಿದ್ದಾರೆ. ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ನಂದಿನಿ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ ದಿಗಂತ್ ಮಂಚಾಲೆ ಅಭಿನಯಿಸಿದ್ದಾರೆ. ಸಿನಿಮಾ ಚಿತ್ರೀಕರಣ ಬಿರುಸಿನಿಂದ ಸಾಗಿದೆ.

Related Articles

Back to top button