Latest

ಸಚಿವ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ

ಪ್ರಗತಿವಾಹಿನಿ ಸುದ್ದಿ, ಮೈಸೂರು

ರಾಜ್ಯದ ಹಿರಿಯ ಸಚಿವ ಸಿ.ಎಸ್.ಪುಟ್ಟರಾಜು ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Home add -Advt

ಸಚಿವರ ಮೈಸೂರು ಮತ್ತು ಮಂಡ್ಯ ನಿವಾಸ ಹಾಗೂ ಅವರ ಕೆಲವು ಸಂಬಂಧಿಕರ ಮನೆಗಳ ಮೇಲೂ ದಾಳಿ ಮುಂದುವರಿದಿದೆ.

ಇಂದು ರಾಜ್ಯದಲ್ಲಿ ಐಟಿ ದಾಳಿ ನಡೆಯುವ ಮುನ್ಸೂಚನೆಯನ್ನು ಮುಖ್ಯಮಂತ್ರಿ ಎಚ್. ಡಿ.ಕುಮಾರ ಸ್ವಾಮಿ ನಿನ್ನೆಯೇ ನೀಡಿದ್ದರು. ಆದರೆ ಯಾರ ಮನೆಯ ಮೇಲೆ ನಡೆಯಲಿದೆ ಎನ್ನುವುದು ಕುತೂಹಲ ಕೆರಳಿಸಿತ್ತು.

ಇಂದು ಬೆಳಗ್ಗೆ 5 ಗಂಟೆಯಿಂದಲೇ ತಪಾಸಣೆ ಮುಂದುವರಿದಿದೆ.

ಹೆದರುವ ಪ್ರಶ್ನೆ ಇಲ್ಲ:

ಐಟಿ ದಾಳಿಯಿಂದ ನಾವು ಹೆದರುವುದಿಲ್ಲ. ನಮ್ಮ ಕಾರ್ಯಕರ್ತರು ಇನ್ನಷ್ಟು ಜೋರಾಗಿ ಕೆಲಸ ಮಾಡಲಿದ್ದಾರೆ ಎಂದು ಪುಟ್ಟರಾಜು ಪ್ರತಿಕ್ರಿಯಿಸಿದ್ದಾರೆ.

ಅಧಿಕಾರಿಗಳಿಗೆ ಎಲ್ಲ ಸಹಕಾರ ನೀಡಲಾಗುವುದು. ಅವರು ಅವರ ಕೆಲಸ ಮಾಡಲಿ. ಆದರೆ ಈ ರೀತಿ ರಾಜಕೀಯ ಪ್ರೇರಿತರಾಗಿ ದಾಳಿ ಮಾಡುವುದು ಸರಿಯಲ್ಲ. ಇಂತದಕ್ಕೆಲ್ಲ ನಾವು ಹೆದರುವುದಿಲ್ಲ ಎಂದರು.

Related Articles

Back to top button