Latest

ಒಂದೇ ದಿನದ ಅಂತರದಲ್ಲಿ ವೈದ್ಯ ದಂಪತಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಪುಣೆ –  ಒಂದೇ ದಿನ ಅಂತರದಲ್ಲಿ ವೈದ್ಯ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಣೆ ಸಮೀಪ ವನೌಡಿ ಎಂಬಲ್ಲಿ ಈ ಘಟನೆ ನಡೆದಿದ್ದು 2019ರಲ್ಲಿ ಇವರ ವಿವಾಹವಾಗಿತ್ತು.

ನಿಖಿಲ್ ಶೇಂಡಕರ್ (28) ಮತ್ತು ಅಂಖಿತಾ (25) ಆತ್ಮಹತ್ಯೆ ಮಾಡಿಕೊಂಡವರು. ಆಝಾದ್ ನಗರದ ಮನೆಯಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಖಿತಾ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರೆ, ನಿಖಿಲ್ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಎಎಂಎಸ್ ಪದವೀಧರರಾಗಿರುವ ಇವರು ಒಂದೇ ಕ್ಲಿನಿಕ್ ನಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ಈಚೆಗೆ ನಿಖಿಲ್ ಇನ್ನೂ ಎರಡು ಕಡೆ ಕ್ಲಿನಿಕ್ ಆರಂಭಿಸಿದ್ದರು. ಸಂಜೆ 4 ಗಂಟೆಗೆ ಅವರ ರೋಗಿಯೊಬ್ಬರಿಂದ ಫೋನ್ ಬಂದಿದೆ. ಆಗ ನಿಖಿಲ್ ಬೇರೆ ಕ್ಲಿನಿಕ್ ನಲ್ಲಿದ್ದರು. ಹಾಗಾಗಿ ರೋಗಿಯನ್ನು ರೋಡುವಂತೆ ಪತ್ನಿಗೆ ಹೇಳಿದ್ದಾರೆ. ರೋಗಿಯನ್ನು ನೋಡಲು ಅಂಖಿತಾ ನಿರಾಕರಿಸಿದ್ದಾಳೆ. ಈ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಗುರುವಾರ ಸಂಜೆ 4 ಗಂಟೆ ಹೊತ್ತಿಗೆ ಫೋನ್ ನಲ್ಲಿ ಜಗಳ ನಡೆದಿದೆ.

ನಂತರ 5.15 ಗಂಟೆ ಹೊತ್ತಿಗೆ ನಿಖಿಲ್ ಮನೆಗೆ ಬಂದುರೂಮಿನ ಬಾಗಿಲು ಬಡಿದರೂ ತೆರೆಯಲಿಲ್ಲ. ಬಹಳ ಹೊತ್ತಿನವರೆಗೆ ಒಳಗಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

Home add -Advt

ನಂತರ ನಿಖಿಲ್ ಬಾಗಿಲನ್ನು ಒಡೆದು ಒಳಪ್ರವೇಶಿಸಿದಾಗ ಅಂಖಿತಾ ದುಪಟ್ಟಾದಿಂದ ಫ್ಯಾನಿಗೆ ನೇಣು ಹಾಕಿಕೊಂಡಿದ್ದಳು. ತಕ್ಷಣ ಪೊಲೀಸರು ಸ್ಥಳಕೆಕ ಧಾವಿಸಿ ಅಂಖಿತಾಳನ್ನು ಸಸೂನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ಆಕೆ ಮೃತಪಟ್ಟಿದ್ದಾಗಿ ಘೋಷಿಸಲಾಯಿತು.

ಇದಾಗಿ ಸ್ವಲ್ಪ ಹೊತ್ತಿಗೆ, ರಾತ್ರಿ 7.30ಕ್ಕೆ ನಿಖಿಲ್ ಮನೆಯ ಬಾತ್ ರೂಮ್ ನಲ್ಲಿ ನೇಣು ಹಾಕಿಕೊಂಡಿದ್ದಾರೆ. ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಡಿಸಿಪಿ ನಮ್ರತಾ ಪಾಟೀಲ್ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ವನೌಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿಯಲ್ಲಿಂದು 6 ಜನರ ಸಾವು

 

Related Articles

Back to top button