Latest

ತೋಟದ ಮನೆಯಲ್ಲಿಯೇ ಉದ್ಯಮಿಯ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿಯೋರ್ವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಮರವಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.

ಮೃತ ರಿಯಲ್ ಎಸ್ಟೇಟ್ ಉದ್ಯಮಿ ಲಿಂಗರಾಜು (43) ಎಂದು ಗುರುತಿಸಲಾಗಿದೆ. ಚನ್ನರಾಯಪಟ್ಟಣದ ಹಿರೇಸಾವಿ ಕಮರವಳ್ಳಿ ಗ್ರಾಮದ ತೋಟದ ಮನೆಯಲ್ಲಿ ಲಿಂಗರಾಜು ಹತ್ಯೆ ಮಾಡಲಾಗಿದೆ.

ಕಾರ್ ಹಾಗೂ ಬೈಕ್ ನಲ್ಲಿ ಮನೆಗೆ ಬಂದಿದ್ದ 8 ಜನರಿದ್ದ ದುಷ್ಕರ್ಮಿಗಳ ಗುಂಪು, ಹ್ಯಾಮರ್ ಮತ್ತು ಮಚ್ಚಿನಿಂದ ಕೈಕಾಲು, ತಲೆ ಕತರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಿಡಿಸಲು ಬಂದವರ ಮೇಲೂ ಹಲ್ಲೆ ನಡೆಸಿದ್ದಾರೆ. ಸಾಕ್ಷ್ಯ ನಾಶ ಮಾಡಲು ಸಿಸಿಟಿವಿಯ ಡಿವಿಆರ್ ನ್ನು ಕೂಡ ಹೊತ್ತೊಯ್ದಿದ್ದಾರೆ. ಹಿರೇಸಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button