Latest

ಮುರುಘಾಶ್ರೀ ವಿರುದ್ಧ ಪೋಕ್ಸೋ ಕೇಸ್; ಮೂರನೇ ಆರೋಪಿಗೆ ಮಧ್ಯಂತರ ಜಾಮೀನು

ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಮುರುಘಾಮಠದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿಗೆ ಚಿತ್ರದುರ್ಗ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎ3 ಆರೋಪಿಯಾಗಿರುವ ಮಠದ ಉತ್ತರಾಧಿಕಾರಿ ಎನ್ನಲಾಗಿದ್ದ ಆರೋಪಿಗೆ ಚಿತ್ರದುರ್ಗದ ಬಾಲನ್ಯಾಯ ಮಂಡಳಿ ಮಧ್ಯಂತರ ಜಾಮೀನು ನೀಡಿದೆ.

Home add -Advt

ಅ.13ರಂದು ದಾಖಲಾಗಿದ್ದ ಪೋಕ್ಸೋ ಕೇಸ್ ನ ಎರಡನೇ ಪ್ರಕರಣದಲ್ಲಿಯೂ ಎ3 ಆರೋಪಿಯಾಗಿರುವ ಈತ ಮುರುಘಾಶ್ರೀ ವಿರುದ್ಧದ ಪೊಕ್ಸೋ ಕೇಸ್ ನ ಮೊದಲ ಪ್ರಕರಣದಲ್ಲಿಯೂ ಎ3 ಆರೋಪಿಯಾಗಿದ್ದಾನೆ. ಮೊದಲ ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದಿರುವ ಎ3 ಆರೋಪಿಗೆ ಇದೀಗ ಎರಡನೇ ಪ್ರಕರಣದಲ್ಲಿಯೂ ಬಾಲನ್ಯಾಯ ಮಂಡಳಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಬೆಳಗಾವಿ: ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

https://pragati.taskdun.com/belagavi-gogate-collegekannadiga-studentattackbelagavi4-accused-arrested/

Related Articles

Back to top button