Kannada NewsLatest

ಲೈನ್ ರಿಪೇರಿ ವೇಳೆ ಕರೆಂಟ್ ಶಾಕ್ ; ವಿದ್ಯುತ್ ಕಂಬದ ಮೇಲೆ ಇಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಅಥಣಿ: ವಿದ್ಯುತ್ ಲೈನ್ ರಿಪೇರಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಇಬ್ಬರು ಸಿಬ್ಬಂದಿಗಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.

ಇಲ್ಲಿನ ಬಾಳಿಗೇರಿ ಗ್ರಾಮದಲ್ಲಿ ಬಾಳಿಗೇರಿ – ಬೇವನೂರ ಹೆಸ್ಕಾಂ ಲಿಂಕ್ ಲೈನ್ ಕಾಮಗಾರಿ ಮಾಡುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಕೆಲಸ ನಿರ್ವಹಿಸುತ್ತಿದ್ದ ಅಶೋಕ್ ಮಲ್ಲಪ್ಪ ಮಾಳಿ (35) , ಹಣಮಂತ ಹಾಲಪ್ಪ ಮಗದುಮ್ (36) ಮೃತಪಟ್ಟಿದ್ದಾರೆ.

ಇಬ್ಬರೂ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದವರು. ಹೆಸ್ಕಾಂ ಬೇಜವಾಬ್ದಾರಿಯಿಂದ ಇಬ್ಬರು ಲೈನ್ ರಿಪೇರಿ ಕೆಲಸಗಾರರು ಬಲಿಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Home add -Advt

ಪ್ರಕರಣ ಸಂಬಂಧ ಸಂಬಂಧಪಟ್ಟ ಹೆಸ್ಕಾಂ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಲಾಗುವದು ಎಂದು ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

Related Articles

Back to top button