Karnataka NewsLatest

*ಮತ್ತೆ 14 ಪಾಕಿಸ್ತಾನ ಪ್ರಜೆಗಳ ಬಂಧನ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಇತ್ತೀಚೆಗೆ ಪಾಕ್ ಪ್ರಜೆ ಸೇರಿ ನಾಕ್ವರು ವಿದೇಶಿಯರನ್ನು ಬಂಧಿಸಿದ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೆ 14 ಪಾಕ್ ಪ್ರಜೆಗಳನ್ನು ಬಂಧಿಸಲಾಗಿದೆ.

ಈ ಮೂಲಕ ದೇಶದಲ್ಲಿ ಪಾಕ್ ಪ್ರಜೆಗಳ ದೊಡ್ಡದೊಂದು ಜಾಲವೇ ಸಕ್ರಿಯವಾಗಿದೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಜಿಗಣಿ ಪೊಲೀಸರು ದೇಶದಾದ್ಯಂತ ಸಕ್ರಿಯವಾಗಿದ್ದ 14 ಪಾಕ್ ಪ್ರಜೆಗಳನ್ನು ಬಂಧಿಸಿದ್ದಾರೆ.

Home add -Advt

ಈ ಮೂಲಕ ಜಿಗಣಿ ಹಾಗೂ ಕರ್ನಾಟಕ ಪೊಲೀಸರು ಬಂಧಿಸಿರುವ ಪಾಕ್ ಪ್ರಜೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಪ್ರಕರಣದ ಕಿಂಗ್ ಪಿನ್ ಫರ್ವೇಜ್ ಬಂಧನ ಬೆನ್ನಲ್ಲೇ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು ದೇಶದ ನಾನಾಕಡೆಗಳಲ್ಲಿ ಅಡಗಿದ್ದ ಪಾಕ್ ಪ್ರಜೆಗಳನ್ನು ಬಂಧಿಸಿದ್ದಾರೆ.

Related Articles

Back to top button