Latest

ಅಪ್ಪುಗೆ ಪಪ್ಪಿ ಕೊಟ್ಟು ವಿದಾಯ ಹೇಳಿದ ನಾಡು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕನ್ನಡದ ಖ್ಯಾತ ನಟ ಪುನಿತ್ ರಾಜಕುಮಾರ   ಬೆಳಗಿನಜಾವ ಮಣ್ಣಲ್ಲಿ ಮಣ್ಣಾದರು. ಅವರ ಅಂತಿಮ ವಿಧಿವಿಧಾನಗಳ ನಂತರ ಕಂಠೀರವ ಸ್ಟುಡಿಯೋದಲ್ಲಿ ಅವರ ತಂದೆ ಡಾ.ರಾಜಕುಮಾರ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮುಂಜಾನೆ ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪಾರ್ಥೀವ ಶರೀರಕ್ಕೆ ಮುತ್ತಿಟ್ಟು ಅಶ್ರುತರ್ಪಣ ಅರ್ಪಿಸಿದರು. ಪುನೀತ್ ಕೆನ್ನೆ ಸವರಿದರು. ಈ ಸಂದರ್ಭದಲ್ಲಿ ಕೆಲ ಹೊತ್ತು ಸಿಎಂ ಭಾವುಕರಾದರು. ನಂತರ ಪುನೀತ್  ಅಂತಿಮಯಾತ್ರೆ ಆರಂಭವಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಪುನೀತ್ ರಾಜಕುಮಾರ ಅವರ ಪಾರ್ಥಿವ ಶರೀರಕ್ಕೆ ಅಂತಿಮ‌ ನಮನ ಸಲ್ಲಿಸಿದರು. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಗೃಹ ಸಚಿವ ಅರಗ ಜ್ಞಾನೇಂದ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಸಾವಿರಾರು ಗಣ್ಯರು ಅಂತಿಮ‌ನಮನ ಸಲ್ಲಿಸಿದರು.

Home add -Advt

ಇಡೀ ನಾಡು ಕಣ್ಣೀರ ಧಾರೆಯಲ್ಲಿ ಅವರನ್ನು ಬೀಳ್ಕೊಟ್ಟಿತು.

ಪುನೀತ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಯಾರಿಗೆಲ್ಲ ಅವಕಾಶ? ಇಲ್ಲಿದೆ ಮಾಹಿತಿ

ಅಪ್ಪನ ಸ್ಥಿತಿ ಕಂಡು ಬಿಕ್ಕಿಬಿಕ್ಕಿ ಅತ್ತ ಪುತ್ರಿ; ಪುನೀತ್ ಅಂತಿಮ ದರ್ಶನ ಪಡೆದ ಮಗಳು ಧೃತಿ

Related Articles

Back to top button