Kannada NewsLatest

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರ ಹತ್ಯೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಜಾನೆಯ ಬೆಳಕು ಹರಿಯುವ ಮುನ್ನವೇ ಬೆಳಗಾವಿ ಮಹಾನಗರದ ಉದ್ಯಮಬಾಗ ಪ್ರದೇಶದಲ್ಲಿ ಯುವಕನೊಬ್ಬನ ಭೀಕರ ಕೊಲೆ ನಡೆದಿದೆ.

ಯಲ್ಲೇಶ ಶಿವಾಜಿ ಕೋಲ್ಕರ್ (27) ಎಂಬ ಯುವಕನನ್ನು ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

Home add -Advt

ಯಲ್ಲೇಶ ಮಜಗಾವಿಯ ಅಂಬೇಡ್ಕರಗಲ್ಲಿ ನಿವಾಸಿಯಾಗಿದ್ದು ಕೊಲೆಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಬೆಳಗ್ಗೆ ಈತನ ರಕ್ತಸಿಕ್ತ ದೇಹ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡವರು ದಂಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಉದ್ಯಮಬಾಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುಟಾಣಿ ಮಕ್ಕಳನ್ನು ಕೊಲೆಗೈದು ಶವಗಳೊಂದಿಗೆ ಠಾಣೆಗೆ ಬಂದ ತಂದೆ

Related Articles

Back to top button