Belagavi NewsBelgaum NewsNational
*ಕುಂಭಮೇಳದಲ್ಲಿ ಕಾಲ್ತುಳಿತ ದುರಂತ: ಮೃತರಿಗೆ ಗೌರವ ಸಲ್ಲಿಸಿದ ಮೃಣಾಲ್ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ: ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಸಾವನ್ನಪ್ಪಿದ ಬೆಳಗಾವಿ ಮೂಲದ ನಾಲ್ವರ ಮೃತದೇಹ ಪ್ರಯಾಗ್ ರಾಜ್ ಮೂಲಕ ದೆಹಲಿಗೆ ಬಂದು ತಲುಪಿದ್ದು, ಕುಟುಂಬಸ್ಥರ ನೆರವಿಗೆ ಕಾಂಗ್ರೆಸ್ ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ಧಾವಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಸಂಭವಿಸಿದ ಮಹಾಕುಂಭಮೇಳದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಬೆಳಗಾವಿಗೆ ತರಲಾಗುತ್ತಿದೆ. ಮೃತರ ಕುಟುಂಬದ ನೆರವಿಗೆ ಕಾಂಗ್ರೆಸ್ ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ಧಾವಿಸಿದ್ದು, ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು. ಮೃತರಿಗೆ ಗೌರವ ನಮನ ಸಲ್ಲಿಸಿದರು.
ಈಗಾಗಲೇ ಮೃತದೇಹ ರಸ್ತೆ ಮಾರ್ಗವಾಗಿ ದೆಹಲಿಗೆ ಬಂದು ತಲುಪಿದ್ದು, ದೆಹಲಿಯಿಂದ ಮಧ್ಯಾಹ್ನ 3:30ರ ವಿಮಾನದಲ್ಲಿ ಬೆಳಗಾವಿಗೆ ತರಲಾಗುತ್ತಿದೆ. ಮೃಣಾಲ್ ಹೆಬ್ಬಾಳ್ಕರ್ ಗೆ ಟಿ.ಬಿ.ಜಯಚಂದ್ರ ಸಾಥ್ ನೀಡಿದ್ದಾರೆ.