Kannada NewsKarnataka NewsLatest

*ಅಯ್ಯಪ್ಪ ಮಾಲಾಧಾರಿಗಳನ್ನು ತಡೆದ ಅರಣ್ಯ ಇಲಾಖೆ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ಪಾದಯಾತ್ರೆ ಮೂಲಕವಾಗಿ ಸಾಗಿ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದಿರುವ ಘಟನೆ ನಡೆದಿದೆ.

ಅಯ್ಯಪ್ಪ ಮಾಲಾಧಾರಿಗಳನ್ನು ಚಾಮರಾಜನಗರ ಜಿಲ್ಲೆಯ ಮದ್ದೂರು ಬಳಿಯ ಮೂಲೆ ಹೊಳೆ ಚೆಕ್ ಪೋಸ್ಟ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ಕಾಡಿನ ಒಳದಾರಿ ಮೂಲಕ ಪಾದಯಾತ್ರೆ ತೆರಳಲು ನಮಗೆ ಅವಕಾಶ ಕೊಡುವಂತೆ ಮಾಲಾಧಾರಿಗಳು ಪಟ್ಟು ಹಿಡಿದಿದ್ದಾರೆ.

Home add -Advt

ಮೂಲೆ ಹೊಳೆ ಚೆಕ್ ಪೋಸ್ಟ್ ಮೂಲಕ ಕಾಡಿನ ದಾರಿಯಲ್ಲಿ ತೆರಳಲು ಅಯ್ಯಪ್ಪ ಮಾಲಾಧಾರಿಗಳು ಯತ್ನಿಸಿದ್ದರು. ಕಾಡಾನೆ, ಚಿರತೆ ದಾಳಿ ಮಾಡುತ್ತವೆ. ಅಲ್ಲದೇ ಈ ಭಾಗ ಬಂಡೀಪುರ ರಿಸರ್ವ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಬರುವುದರಿಂದ ಕಾಡು ಪ್ರಾಣಿಗಳು ಹೆಚ್ಚಿರುವುದರಿಂದ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಪಾದಯಾತ್ರೆ ಮೂಲಕ ಸಾಗಲು ಅವಕಾಶವಿಲ್ಲ ಎಂದು ಅರನ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ತಿಳಿಸಿದ್ದಾರೆ.

ಮಾಲಾಧಾರಿಗಳು ಚೆಕ್ ಪೋಸ್ಟ್ ಬಳಿಯೇ ಧರಣಿ ಕುಳಿತಿದ್ದು, ನಾವು ಕಾಡಿನ ಒಳದಾರಿಯಲ್ಲಿ ಅಯ್ಯಪ್ಪ ದರ್ಶನಕ್ಕೆ ತೆರಳುತ್ತೇವೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಅರನ್ಯ ಇಅಲಖೆ ಸಿಬ್ಬಂದಿ ಒಪ್ಪುತ್ತಿಲ್ಲ. ಮಾಲಾಧಾರಿಗಳಿಗೆ ವಾಹನದಲ್ಲಿ ತೆರಳುವಮ್ತೆ ಸೂಚಿಸಿದ್ದಾರೆ.

Related Articles

Back to top button