
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇಂದು ಒಂದೇ ದಿನದಲ್ಲಿ 308 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಇಂದು ಹೊಸದಾಗಿ 308 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇಂದು ಮೂವರು ಸೋಂಕಿಗೆ ಬಲಿಯಾಗಿದ್ದಾರೆ.
ಕಲಬುರಗಿ 99, ಯಾದಗಿರಿಯಲ್ಲಿ 14 ಮಕ್ಕಳು ಸೇರಿ 66 ಜನರಲ್ಲಿ ಸೋಂಕು ಪತ್ತೆ, ಉಡುಪಿ 45, ಬೀದರ್ 48, ಬೆಂಗಳೂರು ನಗರ 18, ಗದಗ 6, ಬಳ್ಳಾರಿ 8, ಧಾರವಾಡ 4, ಬಾಗಲಕೋಟೆ 2, ಶಿವಮೊಗ್ಗ- 4, ಧಾರವಾಡ- 4, ಹಾಸನ- 3, ದಕ್ಷಿಣ ಕನ್ನಡ- 3, ಕೊಪ್ಪಳ- 1, ರಾಮನಗರ- 1 ಕೇಸ್ ಪತ್ತೆಯಾಗಿದೆ.