Latest

ಮದುವೆಯ ಮೊದಲ ದಿನವೇ ಪತ್ನಿಯನ್ನು ಕೊಂದ ಪತಿ ಮಾಡಿದ್ದೇನು?

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಮದುವೆಯಾಗಿ ಒಂದು ದಿನ ಕೂಡ ಆಗಿಲ್ಲ. ಅದು ಮೊದಲ ರಾತ್ರಿಯ ಸಂತಸದಲ್ಲಿರಬೇಕಾದ ಸಂದರ್ಭದಲ್ಲೇ ಪತಿ ಮಹಾಶಯ ಪತ್ನಿಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ತಮಿಳುನಾಡಿನ ತಿರುವೆಲ್ಲೂರ್ ನಲ್ಲಿ ಈ ಘಟನೆ ನಡೆದಿದೆ. ಸಂಧ್ಯಾ (20) ಕೊಲೆಯಾದ ವಧು. ನೀತಿವಾಸನ್ (24) ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

Home add -Advt

ಮೃತ ಸಂಧ್ಯಾ ಮತ್ತು ನೀತಿವಾಸನ್ ಇಬ್ಬರು ಸಂಬಂಧಿಗಳಾಗಿದ್ದರು. ದೇಶಾದ್ಯಂತ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದ ಕಾರಣ ಎರಡು ಕುಟುಂಬದ 20 ಮಂದಿಯ ಸಮ್ಮುಖದಲ್ಲಿ ಬುಧವಾರ ಬೆಳಗ್ಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬುಧವಾರ ರಾತ್ರಿಯೇ ನವ ದಂಪತಿಗೆ ಮೊದಲ ರಾತ್ರಿಯನ್ನು ಕುಟುಂಬಸ್ಥರು ಆಯೋಜನೆ ಮಾಡಿದ್ದರು. ಸಂಬಂಧಿಕರು ಮನೆಯ ಹಾಲ್‍ನಲ್ಲಿ ನಿದ್ದೆ ಮಾಡುತ್ತಿದ್ದರು, ದಂಪತಿ ರೂಮಿನಲ್ಲಿದ್ದರು. ಸ್ವಲ್ಪ ಸಮಯ ನಂತರ ರೂಮಿನಲ್ಲಿ ಸಂಧ್ಯಾ ಜೋರಾಗಿ ಕೂಗಿಕೊಂಡಿದ್ದಾಳೆ. ತಕ್ಷಣ ಗಾಬರಿಯಿಂದ ಸಂಬಂಧಿಕರು ಬಾಗಿಲು ಬಡಿದಿದ್ದಾರೆ. ಆಗ ನೀತಿವಾಸನ್ ಬಾಗಿಲು ತೆರೆದು ಅವರನ್ನು ತಳ್ಳಿ ರೂಮಿನಿಂದ ಓಡಿ ಹೋಗಿದ್ದಾನೆ. ಸಂಬಂಧಿಕರು ರೂಮಿನೊಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಸಂಧ್ಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.

ಪೊಲೀಸರಿಗೆ ಮಾಹಿತಿ ನೀಡಿ ಸಂಧ್ಯಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಸಂಧ್ಯಾ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ನೀತಿವಾಸನ್ ಪತ್ನಿಯನ್ನು ಕೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

Back to top button