Latest

ಗೃಹ ಸಚಿವರು ಎಂಬ ಅರಿವೇ ಇಲ್ಲ; ಹೋಮ್ ಮಿನಿಸ್ಟರ್ ಆಗಲು ಅರಗ ಜ್ಞಾನೇಂದ್ರ ಅಸಮರ್ಥರು; ಸಿದ್ದರಾಮಯ್ಯ; ಹೆಚ್ ಡಿಕೆ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಸ್ವತ: ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ತಾವು ಗೃಹ ಸಚಿವರೆಂಬ ಅರಿವು, ಜವಾಬ್ದಾರಿಯೂ ಇಲ್ಲದಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಉರ್ದು ಬರಲ್ಲ ಎಂದು ಯುವಕನನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾರೆ, ಆತ ದಲಿತ ಯುವಕ ಎಂದು ಗೃಹ ಸಚಿವರಾಗಿ ನೀಡುವ ಹೇಳಿಕೆಯೇ ಇದು? ಒಬ್ಬ ಯುವಕನ ಹತ್ಯೆಯಾಗಿದೆ ಅಂದಮೇಲೆ ಗೃಹ ಸಚಿವರು ಮಾಹಿತಿ ಪಡೆದು ಮಾತನಾಡುವುದನ್ನು ಬಿಟ್ಟು ಸಮಜದಲ್ಲಿ ಶಾಂತಿ ಕದಡುವ ಹೇಳಿಕೆ ಕೊಡುತ್ತಿದ್ದಾರೆ. ಅತ್ತ ಪೊಲೀಸರು ಇನ್ನೊಂದು ರೀತಿ ಹೇಳಿಕೆ ಕೊಡುತ್ತಿದ್ದಾರೆ. ಅಂದರೆ ಗೃಹ ಸಚಿವರ ಹೇಳಿಕೆ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ.

Home add -Advt

ಯಾವ ಉದ್ದೇಶಕ್ಕೆ ಕೊಲೆಯಾದರೂ ಕಠಿಣ ಶಿಕ್ಷೆಯಾಗಲಿ. ಆದರೆ ಗೃಹ ಸಚಿವರಾದವರು ಇಂಥಹ ಹೇಳಿಕೆ ನೀಡಿದರೆ ಪೊಲೀಸ್ ಇಲಾಖೆಯಾದರೂ ಏನು ಮಾಡಲು ಸಾಧ್ಯ? ಗೃಹ ಸಚಿವರಾದವರಿಗೆ ಪದ ಬಳಕೆ, ಜವಾಬ್ದಾರಿ ಅರಿವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆಗೆ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿಂದೂ ಸತ್ತರೂ ಜೀವ, ಮುಸ್ಲಿಂ ಸತ್ತರೂ ಜೀವವೇ. ಅರಗ ಜ್ಞಾನೇಂದ್ರಗೆ ಗೃಹ ಇಲಾಖೆ ನಿಭಾಯಿಸಲು ಬರುತ್ತಿಲ್ಲ. ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಬಗ್ಗೆಯೂ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ಹರ್ಷ ಕೊಲೆ ಪ್ರಕರಣದಲ್ಲಿಯೂ ಮೊದಲಿಗೊಂದು ಹೇಳಿಕೆ ನೀಡದರು. ಈಗ ಮತ್ತೆ ಅಂಥದ್ದೇ ಹೇಳಿಕೆ ಕೊಡುತ್ತಿದ್ದಾರೆ. ಅರಗ ಜ್ಞಾನೇಂದ್ರ ಓರ್ವ ಅಸಮರ್ಥ ಗೃಹ ಸಚಿವ. ಇಂಥವರು ಗೃಹ ಸಚಿವರಾಗಿರುವುದು ನಮ್ಮ ದೌರ್ಭಾಗ್ಯ ಎಂದು ಗುಡುಗಿದ್ದಾರೆ.
ಗೃಹ ಸಚಿವರಿಂದ ಪದೇ ಪದೇ ಯಡವಟ್ಟು; ತಪ್ಪೊಪ್ಪಿಕೊಂಡ ಅರಗ ಜ್ಞಾನೇಂದ್ರ

Related Articles

Back to top button