Karnataka NewsPolitics

*ಕಮಲ್ ಹಾಸನ್ ಹೇಳಿಕೆ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಕನ್ನಡಕ್ಕೆ ದೀರ್ಘ ಇತಿಹಾಸವಿದೆ. ಕಮಲ್ ಹಾಸನ್ ಅವರಿಗೆ ಅದರ ಬಗ್ಗೆ ತಿಳಿದಿಲ್ಲ ಎಂದು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ನಟ ಕಮಲ ಹಾಸನ್ ಹೇಳಿಕೆ ಸಿಎಂ ಸಿದ್ದರಾಮಯ್ಯ ಅವರು ಕಿಡಿಕಾರಿದರು.

ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಸಿನಿಮಾ ಇದೇ ಜೂನ್ 5ರಂದು ರಿಲೀಸ್ ಆಗಲಿದ್ದು, ಈ ಚಿತ್ರದ ಪ್ರಚಾರದಲ್ಲಿ ಕಮಲ್ ಹಾಸನ್ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.

Home add -Advt

ಇದೀಗ ಈ ಹೇಳಿಕೆಗೆ ರಾಜ್ಯದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು ಕಮಲ್ ಹಾಸನ್ ಅವರ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಬಿಡಬಾರದು ಎನ್ನುವ ಆಗ್ರಹ ಕೇಳಿ ಬಂದಿದೆ. ಇದೀಗ ಸಿಎಂ ಪ್ರತಿಕ್ರಿಯಿಸಿದ್ದು, ಕನ್ನಡಕ್ಕೆ ದೀರ್ಘ ಇತಿಹಾಸವಿದೆ. ಪಾಪ ಕಮಲ್ ಹಾಸನ್ ಅವರಿಗೆ ಅದರ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

Related Articles

Back to top button