Kannada NewsLatest

*ಗರ್ಭಕಂಠದ ಕ್ಯಾನ್ಸರ್ ಗೆ ಬಲಿಯಾದ ಮಾಜಿ ವಿಶ್ವ ಸುಂದರಿ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಾಜಿ ವಿಶ್ವಸುಂದರಿ ಶೆರಿಕಾ ಡಿ ಅರ್ಮಾಸ್ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶೆರಿಕಾ ಅತಿ ಚಿಕ್ಕವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದಾರೆ. ಕೇವಲ 26 ವರ್ಷದ ಶೆರಿಕಾ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಕಿಮೋಥೆರಪಿ, ರೆಡಿಯೋಥೆರಪಿ ಸೇರಿದಂತೆ ಹಲವಾರು ಚಿಕಿತ್ಸೆಗೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಶೆರಿಕಾ ಡಿ ಅರ್ಮಾಸ್ 2015ರಲ್ಲಿ ಉರುಗ್ವೆ ದೇಶದಿಂದ ವಿಶ್ವ ಸುಂದರಿ ಪಟ್ಟಕ್ಕೆ ಪ್ರತಿನಿಧಿಸಿದ್ದರು. ಗರ್ಭಕಂಠದ ಕ್ಯಾನ್ಸರ್ ಗೆ ಶೆರಿಕಾ ಕಳೆದ ಶನಿವಾರ ಬಲಿಯಾಗಿದ್ದಾರೆ.


Home add -Advt

Related Articles

Back to top button