National

*ಇಂದಿನಿಂದ ಶಬರಿಮಲೆ ದರ್ಶನ ಆರಂಭ*

ಪ್ರಗತಿವಾಹಿನಿ ಸುದ್ದಿ : ಭಾರತದ ಪ್ರಸಿದ್ದ ಯಾತ್ರಾ ಸ್ಥಳ ಶಬರಿಮಲೆಯ ದೇಗುಲ ಇಂದು ತೆರೆಯಲಿದೆ. ಶುಕ್ರವಾರದಿಂದ ಮಂಡಳ ಪೂಜೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1.00 ಗಂಟೆಯಿಂದ ಭಕ್ತಾದಿಗಳು ಪಂಪಾನದಿಯಿಂದ ಶಬರಿಮಲೆ ಯಾತ್ರೆ ಪ್ರಾರಂಭಿಸಬಹುದಾಗಿದೆ.

ಈ ಬಾರಿ ಆನ್‌ಲೈನ್ ಮೂಲಕ ಮುಂಗಡ ಬುಕಿಂಗ್ ಸೌಲಭ್ಯವನ್ನು ನೀಡಲಾಗಿತ್ತು. ನವೆಂಬ‌ರ್ ತಿಂಗಳ ಎಲ್ಲಾ ದಿನಗಳೂ ಈಗಾಗಲೇ ಬುಕಿಂಗ್ ಭರ್ತಿಯಾಗಿದ್ದು, ಕೇವಲ ನ.30 ರ ಕೆಲವು ಸ್ಲಾಟ್ ಗಳು ಮಾತ್ರ ಲಭ್ಯವಿದೆ. ಡಿಸೆಂಬರ್ ತಿಂಗಳಲ್ಲಿ ದರ್ಶನ ಪಡೆಯಲು ಲಕ್ಷಾಂತರ ಮಂದಿ ಭಕ್ತರು ಸರದಿಯಲ್ಲಿದ್ದಾರೆ. ಈಗಾಗಲೇ ಮುಂಗಡ ಬುಕಿಂಗ್ ಮಾಡಿರುವ ಭಕ್ತರು ಒಂದು ವೇಳೆ ತಮ್ಮ ಪ್ರಯಾಣ ರದ್ದಾದರೆ ಅಥವಾ ಮುಂದೂಡಿಕೆಯಾದರೆ ತಮ್ಮ ಸ್ಲಾಟ್ ಕ್ಯಾನ್ಸಲ್ ಮಾಡಬೇಕೆಂದು ಆಡಳಿತ ಮಂಡಳಿ ಮನವಿ ಮಾಡಿದೆ.

ನೇರವಾಗಿ ದರ್ಶನಕ್ಕೆ ಬರುವ ಭಕ್ತರು ತಮ್ಮ ಆಧಾರ್ ಕಾಡ್, ವೋಟರ್ ಐಡಿ ಅಥವಾ ಪಾಸ್ ಪೋರ್ಟ್ ಗುರುತಿನ ಚೀಟಿಯ ನಕಲು ತರಬೇಕು. ಪಂಪಾ ನದಿಯ ಬಳಿ 7 ಸಾವಿರ ಯಾತ್ರಿಕರಿಗೆ ಹಾಗೂ ನೀಲಕ್ಕಲ್ ಬಳಿ 8 ಸಾವಿರ ಯಾತ್ರಿಕರಿಗೆ ವಾಸ್ತವ್ಯದ ಅನುಕೂಲ ಕಲ್ಪಿಸಲಾಗಿದೆ ಎಂದು ದೇವಸ್ವಂ ಬೋರ್ಡ್ ತಿಳಿಸಿದೆ.

Home add -Advt

Related Articles

Back to top button