Latest

*ನಾಗಮಂಗಲ ಗಲಭೆ ಪ್ರಕರಣ: ಬಂಧನ ಭೀತಿಯಲ್ಲಿ ಊರು ತೊರೆದಿದ್ದ ಆರೋಪಿ ಬ್ರೇನ್ ಸ್ಟ್ರೋಕ್ ನಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆಯ ನಾಗಮಂಗಲ ಗಲಭೆ ಪ್ರಕರ್ಣದ ಆರೋಪಿಯೊಬ್ಬ ಬ್ರೇನ್ ಸ್ಟ್ರೋಕ್ ನಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

23 ವರ್ಷದ ಯುವಕ ಕಿರಣ್ ಮೃತ ಆರೋಪಿ. ಈತ ನಾಗಮಂಗಲ ಗಲಭೆ ಪ್ರಕರಣದ ಎ 17ನೇ ಆರೋಪಿ ಆಗಿದ್ದಾನೆ. ಪ್ರಕರಣ ಸಂಬಂಧ ಈತನ ತಂದೆ ಈಗಾಗಲೇ ಜೈಲು ಸೇರಿದ್ದಾರೆ.

ಗಣೇಶ ಮೂರ್ತಿ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ಗಲಭೆ ನಡೆದಿತ್ತು. ಪ್ರಕರನ ಸಂಬಂಧ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹಲವರು ಬಂಧನ ಭೀತಿಯಲ್ಲಿ ಊರು ತೊರೆದಿದ್ದರು. ಆರೋಪಿ ಕಿರಣ್ ಕೂಡ ಸೆ.11ರಿಂದ ನಾಗಮಂಗಲದ ತನ್ನ ಊರು ತೊರೆದು ತಲೆಮರೆಸಿಕೊಂಡಿದ್ದ. ಆತನಿಗಾಗಿ ಪೊಲಿಸರು ಹುಡುಕಾಟ ನಡೆಸಿದ್ದರು. ಬಂಧನ ಭೀತಿಯಲ್ಲಿದ್ದ ಕಿರಣ್ ಗೆ ನಿನ್ನೆ ರಾತ್ರಿ ಬ್ರೇನ್ ಸ್ಟ್ರೋಕ್ ಆಗಿತ್ತು. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಖಲಿಸಲಾಗಿತ್ತು.

Home add -Advt

ಆದರೆ ಚಿಕಿತ್ಸೆ ಫಲಿಸದೇ ಕಿರಣ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

Related Articles

Back to top button