EducationLatest

ಶ್ರೀ ವೇಮನ್ ಸೊಸಾಯಿಟಿಗೆ 1.19 ಕೋಟಿ ರೂ. ಲಾಭ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ:

ಇಲ್ಲಿಯ ಶ್ರೀ ವೇಮನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯು ಪ್ರಸಕ್ತ ಮಾರ್ಚ್-೨೦೧೯ ರ ಅಂತ್ಯಕ್ಕೆ ೧.೧೯ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸೊಸಾಯಿಟಿ ಅಧ್ಯಕ್ಷ ಸಂತೋಷ ಸೋನವಾಲ್ಕರ ತಿಳಿಸಿದ್ದಾರೆ.

Home add -Advt

ಅವರು ಸಂಘದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸೊಸಾಯಿಟಿಯು ೫೯.೮೮ ಕೋಟಿ ಠೇವು ಹೊಂದಿ, ೩೩.೦೫ ಕೋಟಿ ಸಾಲ ವಿತರಿಸಿದೆ. ೧.೮೭ ಕೋಟಿ ಶೇರು ಬಂಡವಾಳ ಹೊಂದಿ, ೪.೯೪ ಕೋಟಿ ವಿವಿಧ ಬ್ಯಾಂಕ್ ಎಸ್.ಬಿ. ಖಾತೆಗಳಲ್ಲಿ ಹೊಂದಿದೆ. ೩.೨೬ ಕೋಟಿ ನಿಧಿಗಳನ್ನು ಹೊಂದಿ, ೨೭.೭೬ ಕೋಟಿ ವಿವಿಧ ಬ್ಯಾಂಕುಗಳಲ್ಲಿ ಗುಂತಾವಣೆ ಮಾಡಿ, ೬೮.೯೧ ಕೋಟಿ ದುಡಿಯುವ ಬಂಡವಾಳ ಹೊಂದಿ, ೧೯೫.೨೮ ಕೋಟಿ ವ್ಯವಹಾರ ನಡೆಸಿದೆ ಎಂದು ಪ್ರಧಾನ ವ್ಯವಸ್ಥಾಪಕ ಪರಶುರಾಮ ಕುಟರಟ್ಟಿ ತಿಳಿಸಿದರು.
ಸೊಸಾಯಿಟಿಯು ಹುಲಕುಂದ, ರಾಮದುರ್ಗ, ಯಾದವಾಡ, ಹೊಸಕೋಟಿ, ಮುಧೋಳಗಳಲ್ಲಿ ಶಾಖೆಯನ್ನು ಹೊಂದಿ ಪ್ರಗತಿಯತ್ತ ನಡೆಯುತ್ತಿವೆ ಎಂದು ಸೊಸಾಯಿಟಿ ಉಪಾಧ್ಯಕ್ಷ ಹಣಮಂತಗೌಡ ಪ್ಯಾಟಿಗೌಡರ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸೊಸಾಯಿಟಿ ನಿರ್ದೇಶಕರಾದ ವಿ.ಎ.ಸೋನವಾಲ್ಕರ, ಪಿ.ಎಚ್.ಸೋನವಾಲ್ಕರ, ವೈ.ಜಿ.ಮಂಟನವರ, ಟಿ.ವೈ.ಝಂಡೇಕುರಬರ, ಎಚ್.ಆರ್.ದಂಡಪ್ಪನವರ, ವಿ.ವೈ.ಸತರಡ್ಡಿ, ಎಸ್.ಡಿಕೆ.ಪೂಜೇರಿ, ಎಸ್.ಜಿ.ಸೋನವಾಲ್ಕರ, ಎಲ್.ವಿ.ಸಂತಿ, ಆರ್.ವೈ.ಹಾದಿಮನಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Back to top button