Karnataka News

*ಪ್ರಿಯತಮೆಯನ್ನು ಹೋಟೆಲ್ ಗೆ ಕರೆದು ಇರಿದು ಕೊಂದ ಟೆಕ್ಕಿ*

ಪ್ರಗತಿವಾಹಿನಿ ಸುದ್ದಿ: ಟೆಕ್ಕಿ ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನೇ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಹೋಟೆಲ್ ರೂಂ ನಲ್ಲಿ ನಡೆದಿದೆ.

ಪೂರ್ಣಪ್ರಜ್ಞಾ ಲೇಔಟ್ ನ ಓಯೋ ಹೋಟೆಲ್ ರೂಂ ನಲ್ಲಿ ಈ ಘಟನೆ ನಡೆದಿದೆ. ಹರಿಣಿ (36) ಕೊಲೆಯಾಗಿರುವ ಪ್ರಿಯತಮೆ. ಟೆಕ್ಕಿ ಯಶಸ್ ಯುವತಿಯನ್ನು ಕೊಂದ ಆರೋಪಿ.

ಇಬ್ಬರೂ ಕೆಂಗೇರಿ ನಿವಾಸಿಗಳು. ಪೂರ್ಣಪ್ರಜ್ಞಾ ಲೇಔಟ್ ನ ಓಯೋ ಹೋಟೆಲ್ ನಲ್ಲಿ ರೂಂ ಪಡೆದಿದ್ದರು. ಪ್ರಿಯತಮೆ ಮತ್ತೊಂದು ಸಂಬಂಧ ಹೊಂದಿರಬಹುದು ಎಂಬ ಅನುಮಾನಕ್ಕೆ ಯಶಸ್ ಆಕೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button