Latest

ಗೋಕಾಕ ಟಿಎಪಿಸಿಎಂಎಸ್: ಎಲ್ಲ 14 ಸ್ಥಾನಗಳಿಗೂ ಅವಿರೋಧ ಆಯ್ಕೆ

 
 ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಗೋಕಾಕ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ 14 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2019-20 ರಿಂದ 2023-24 ರ ಅವಧಿಗೆ ಮಾರ್ಚ್ 18 ರಂದು ನಡೆಯಬೇಕಿದ್ದ ಆಡಳಿತ ಮಂಡಳಿ ಚುನಾವಣೆಯಲ್ಲಿ 14 ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಸಹಕಾರಿ ಸಂಘಗಳ ಹಿರಿಯ ನಿರೀಕ್ಷಕ ಬಿ.ಕೆ. ಗೋಖಲೆ ಅವರು ತಿಳಿಸಿದ್ದಾರೆ.
ಆಯ್ಕೆಯಾದವರು : “ಅ” ವರ್ಗ ಸಹಕಾರ ಸಂಘಗಳ ವತಿಯಿಂದ ರಾಜಾಪೂರದ ವಿಠ್ಠಲ ಉದ್ದಪ್ಪ ಪಾಟೀಲ, ನಾಗನೂರಿನ ಬಸನಗೌಡ ರಾಮನಗೌಡ ಪಾಟೀಲ, ಮೂಡಲಗಿಯ ಸುಭಾಸ ಗಿರೆಪ್ಪ ಢವಳೇಶ್ವರ, ಶಿವಾಪೂರ(ಹ) ಗ್ರಾಮದ ಈಶ್ವರ ಬಸಪ್ಪ ಬೆಳಗಲಿ, ಮಲ್ಲಾಪೂರ ಪಿಜಿಯ ಸುಭಾಸ ಕಾಡಪ್ಪ ಹುಕ್ಕೇರಿ, ಅರಭಾವಿಯ ಕೆಂಚಪ್ಪ ರಾಮಪ್ಪ ಮಂಟೂರ, “ಬ” ವರ್ಗ ಸಾಮಾನ್ಯ ಕ್ಷೇತ್ರದಿಂದ ಕುಲಗೋಡದ ಅಶೋಕ ಮುದಕಪ್ಪ ನಾಯಿಕ, ಮೆಳವಂಕಿಯ ಬಸಗೌಡ ದುಂಡನಗೌಡ ಪಾಟೀಲ, “ಬ” ವರ್ಗ ಮಹಿಳಾ ಕ್ಷೇತ್ರದಿಂದ ಅರಭಾವಿಯ ಗಂಗವ್ವ ಸಾತಪ್ಪ ಜೈನ, ಅಕ್ಕತಂಗೇರಹಾಳದ ಲುಬನಾ ಗೌಸಮೋದ್ದೀನ ದೇಸಾಯಿ, “ಬ” ವರ್ಗ ಹಿಂದುಳಿದ “ಎ” ಕ್ಷೇತ್ರದಿಂದ ತುಕ್ಕಾನಟ್ಟಿಯ ಗುರುನಾಥ ಲಕ್ಷ್ಮಣ ಕಂಕಣವಾಡಿ, ಖಾನಟ್ಟಿಯ ವೆಂಕನಗೌಡ ಬಾಲಗೌಡ ಪಾಟೀಲ, “ಬ” ವರ್ಗ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಮೂಡಲಗಿಯ ಪ್ರಭಾಕರ ತಾ.ರತ್ನವ್ವ ಬಂಗೆನ್ನವರ, “ಬ” ವರ್ಗ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಗೋಕಾಕದ ಸುರೇಶ ಭೀಮಶಿ ಗುಡ್ಡಾಕಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Related Articles

Back to top button