CrimeKarnataka NewsLatest

*ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ: ಮನೆ ಕೆಲಸದವನಿಂದಲೇ ಕೃತ್ಯ*

ಪ್ರಗತಿವಾಹಿನಿ ಸುದ್ದಿ: 65 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಬಳಿಕ ಬರ್ಬರವಾಗಿ ಕೊಲೆಗೈದ ವ್ಯಕ್ತಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Home add -Advt

ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿಯ ಕೆ.ಎ.ಎಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸರಿತಾ (65) ಎಂದು ಗುರುತಿಸಲಾಗಿದೆ. ಸರಿತಾ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ದೇವರಾಜು (55) ಎಂಬಾತ ಈ ಕೃತ್ಯವೆಸಗಿದ್ದಾನೆ.

ಸರಿತಾ ಅವರ ಪತಿ ಉದ್ಯೋಗದ ಹಿನ್ನೆಲೆಯಲ್ಲಿ ದುಬೈಗೆ ಹೋಗಿದ್ದರು. ಇಂದು ಮುಂಜಾನೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಮನೆಯ ಬೆಲ್ ಮಾಡಿದಾಗ ಮೊದಲ ಮಹಡಿಯಲ್ಲಿದ್ದ ಮಗಳು ಬಂದು ಬಾಗಿಲು ತೆರೆದು ಬಳಿಕ ತನ್ನ ಕೋಣೆಗೆ ಹೋಗಿದ್ದಾಳೆ. ಸರಿತಾ ಪತಿ ಕೆಳ ಮಹಡಿಯಲ್ಲಿದ್ದ ಸರಿತಾ ಕೋಣೆಗೆ ಹೋಗಿ ನೋಡಿದಾಗ ಪತ್ನಿ ರಕ್ತದ ಮಡುವಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮನೆಯ ಮೊದಲ ಮಹಡಿಯಲ್ಲಿಯೇ ಮಗಳು ಇದ್ದರೂ ಆಕೆಗೆ ಕೆಳ ಮಹಡಿಯಲ್ಲಿ ನಡೆದ ಘಟನೆ ಬಗ್ಗೆ ಅರಿವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆ ಕೆಲಸದವ ದೇವರಾಜು ಅದೇ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ದೇವರಾಜುನೇ ಸರಿತಾಳ ಮೇಲೆ ಅಟ್ಟಹಾಸ ಮೆರೆದು ಕೊಲೆಗೈದು ಬಳಿಕ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.


Related Articles

Back to top button