Latest

ಹಾಸನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ರೇವಣ್ಣ ಎದುರೇ ತೀವ್ರ ಗದ್ದಲ

ಪ್ರಗತಿವಾಹಿನಿ ಸುದ್ದಿ, ಹಾಸನ

ಹಾಸನದಲ್ಲಿ ಇಂದು ಬೆಳಗ್ಗೆ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾರೀ ಗದ್ದಲ ನಡೆದಿದೆ. ಸಭೆೆಗೆ ಜೆಡಿಎಸ್ ನಾಯಕ, ಸಚಿವ ಎಚ್.ಡಿ.ರೇವಣ್ಣ ಆಗಮಿಸಿದ್ದೇ ಕಾರ್ಯಕರ್ತರ ಗದ್ದಲಕ್ಕೆ ಕಾರಣ.

Home add -Advt

ಹಾಸನದಲ್ಲಿ ಕಾ್ಗ್ರಿಸೆ-ಜೆಡಿಎಸ್ ಮೈತ್ರಿ ಅನ್ವಯ ರೇವಣ್ಣ ಪುತ್ರ ಪ್ರಜ್ವಲ್ ಕಣಕ್ಕಿಳಿದಿದ್ದಾರೆ. ಆದರೆ ಇದಕ್ಕೆ ಸಮ್ಮತಿ ನೀಡದ ಕಾಂಗ್ರೆಸ್ ಕಾರ್ಯಕರ್ತರು, ನಾವು ಕಾಂಗ್ರೆಸ್ ನವರು, ಜೆಡಿಎಸ್ ನಮ್ಮ ವಿರೋಧಿ. ಜೆಡಿಎಸ್ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ನಾವು ಬಿಜೆಪಿಗೆ ಮತ ಹಾಕುತ್ತೇವೆಯೇ ವಿನಃ ಜೆಡಿಎಸ್ ಗೆ ಹಾಕುವುದಿಲ್ಲ ಎಂದು ರೇವಣ್ಣ ಎದುರಲ್ಲೇ ತೀವ್ರವಾಗಿ ಕಿಡಿಕಾರಿದರು. 

ಈ ವೇಳೆ ರೇವಣ್ಣ ಎರಡೂ ಕೈಯಲ್ಲಿ ಸುಮಾರು 7-8 ಲಿಂಬೆಹಣ್ಣುಗಳನ್ನು ಹಿಡಿದುಕೊಂಡು ಕುಳಿತಿದ್ದರು. ಆದರೆ ಲಿಂಬೆಹಣ್ಣು ಗದ್ದಲ ಮಾಡುತ್ತಿರುವವರ ಮೇಲೆ ಯಾವುದೇ ರೀತಿಯ ಪ್ರಭಾವ ಬೀರಿದಂತೆ ಕಾಣಲಿಲ್ಲ.

Related Articles

Back to top button