Kannada NewsKarnataka NewsNationalPolitics

*ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಸೇಡು: ಉಡುಪಿಯಲ್ಲಿ ಆಟೋ ಚಾಲಕನ ಕೊಲೆ ಯತ್ನ* 

 ಪ್ರಗತಿವಾಹಿನಿ ಸುದ್ದಿ: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರವಾಗಿ ಉಡುಪಿಯಲ್ಲಿ ಗುರುವಾರ ರಾತ್ರಿ ಆಟೋ ಚಾಲಕ ಅಬ್ಬೂಬಕ್ಕರ್ ಎಂಬುವರ ಕೊಲೆ ಯತ್ನ ನಡೆದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. 

ನಿನ್ನೆ ರಾತ್ರಿ ಅಟೋ ಚಾಲಕ ಅಬ್ಬೂಬಕ್ಕರ್ ನನ್ನು ಅಡ್ಡಗಟ್ಟಿ ಕೊಲೆಗೆ ಯತ್ನ ನಡೆದಿದೆ. ಸುಶಾಂತ್ ಮತ್ತು ಸಂದೇಶ್ ಪೂಜಾರಿಯಿಂದ ಈ ಕೃತ್ಯ ನಡೆದಿದ್ದು, ತಲವಾರು ಮತ್ತು ಬಾಟಲಿಯಿಂದ ಕೊಲೆ ಯತ್ನ ನಡೆದಿದ್ದು, ದಾಳಿಯಿಂದ ತಪ್ಪಿಸಿಕೊಂಡ ಅಟೋ ಚಾಲಕ ಅಬೂಬ್ಬಕ್ಕರ್, ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. 

ತಕ್ಷಣ ಎಚ್ಚೆತ್ತುಕೊಂಡ ಹಿರಿಯಡ್ಕ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ವೇಳೆಯಲ್ಲಿ ಸುಶಾಂತ್ ಶೆಟ್ಟಿಗೆ ಹತ್ಯೆಗೆ ಪ್ರತಿಕಾರವಾಗಿ ಕೊಲೆ ಯತ್ನ ನಡೆಸಿದ್ದೇವೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button