
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು :
ಸಮೀಪದ ತಿಗಡೊಳ್ಳಿ ಗ್ರಾಮದ ಭರತೇಶ ಪ್ರೌಢ ಶಾಲೆಯ ಕೊಠಡಿಗೆ ಶನಿವಾರ ಆಕಸ್ಮಿಕ ವಿದ್ಯುತ್ ಅವಘಡದಿಂದ ಬೆಂಕಿ ಹತ್ತಿದ ಹಿನ್ನೆಲೆಯಲ್ಲಿ ರವಿವಾರ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ಶಾಸಕ ಮಹಾಂತೇಶ ದೊಡಗೌಡ ಶಾಲೆಗೆ ಭೆಟ್ಟಿ ನೀಡಿದ್ದಾರೆ.

ಕೊಠಡಿಗೆ ಆಕಸ್ಮಿಕ ವಿದ್ಯುತ್ ಅವಘಡದಿಂದ ಬೆಂಕಿ ಹತ್ತಿದ ಪರಿಣಾಮ ಅಂದಾಜು ೪ ರಿಂದ ೫ ಲಕ್ಷ ರೂ. ಮೌಲ್ಯದ ಸಾಮಗ್ರಿಗಳು ಭಸ್ಮವಾಗಿವೆ ಎಂದು ಶಾಲಾ ಮುಖ್ಯೊಪಾಧ್ಯಾಯ ಸಿ.ಎಮ್.ಮುರಗೊಡ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಈ ಕುರಿತು ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿತ್ತೂರು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಇತರ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆ ಶೇರ್ ಮಾಡಿ)