Latest

*ಏರ್ ಪೋರ್ಟ್ ಬಾತ್ ರೂಮ್ ಕನ್ನಡಿ ಮೇಲೆ ಬಾಂಬ್ ಬೆದರಿಕೆ ಸಂದೇಶ; ಸಿಬ್ಬಂದಿಯಿಂದಲೇ ಕೃತ್ಯ?*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಿಬ್ಬಂದಿ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಸಂದೇಶ ಬಂದಿದ್ದು, ಕೆಲ ಕಾಲ ಆತಂಕದ ವಾತಾವರನ ನಿರ್ಮಾಣವಾದ ಘಟನೆ ನಡೆದಿದೆ.

ಏರ್ ಪೋರ್ಟ್ ನ ಆಲ್ಟಾ 3ನೇ ಬಿಲ್ಡಿಂಗ್ ನ ಬಾತ್ ರೂಮ್ ನಲ್ಲಿರುವ ಕನ್ನಡಿ ಮೇಲೆ ಬಾಂಬ್ ಬೆದರಿಕೆ ಸಂದೇಶ ಬರೆಯಲಾಗಿದೆ. ಏರ್ ಪೋರ್ಟ್ ಆಡಳಿತ ಮಂಡಳಿ ಕಚೇರಿ ಹಾಗು ಏರ್ ಪೋರ್ಟ್ ಸಿಬ್ಬಂದಿ ಕಚೇರಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಇದರಿಂದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಆತಂಕಕ್ಕೀಡಾಗಿದ್ದಾರೆ.

ತಕ್ಷಣ ಶ್ವಾನದಳ, ಸಿಐಎಸ್ ಎಫ್ ನಿಂದ ತಪಾಸಣೆ ನಡೆಸಲಾಗಿದ್ದು, ಬಳಿಕ ಇದೊಂದು ಹುಸಿ ಬಾಂಬ್ ಸಂದೇಶ ಎಂದು ತಿಳಿದುಬಂದಿದೆ. ಏರ್ ಪೋರ್ಟ್ ಅಧಿಕಾರಿಗಳು, ಸಿಬ್ಬಂದಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಸಿಬ್ಬಂದಿಯಿಂದಲೇ ಬೆದರಿಕೆ ಸಂದೇಶ ಬರೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Home add -Advt

Related Articles

Back to top button