ಜನತಾ ಕರ್ಫ್ಯೂ ಗೆ ಉತ್ತಮ ಬೆಂಬಲ; ಕರುನಾಡೇ ಸ್ತಬ್ಧ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಶ್ವಾದ್ಯಂತ ಆತಂಕಕ್ಕೆ ಕಾರಣವಗಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತದಲ್ಲಿ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದೆ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಜನರು ಸ್ವಯಂಪ್ರೇರಣೆಯಿಂದ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.

ಜನತಾ ಕರ್ಫ್ಯೂ ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಡೀ ಕರುನಾಡೇ ಸ್ತಬ್ಧವಾಗಿದ್ದು ಹೋಟೆಲ್, ಸಾರಿಗೆ, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ರೈಲು ಸೇವೆ ಕೂಡ ಸ್ತಬ್ಧಗೊಂಡಿದೆ.

Home add -Advt

ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನರಿಲ್ಲದೇ ಖಾಲಿ ಖಾಲಿಯಾಗಿದೆ. ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಕೆಎಸ್​ಆರ್​ಟಿಸಿ ನಿಲ್ದಾಣ ಕೂಡ ಸ್ತಬ್ಧವಾಗಿದೆ. ಮಾರ್ಕೆಟ್​ಗಳು ಕೂಡ ಬಿಕೋ ಎನ್ನುತ್ತಿವೆ. ಎಂ.ಜಿ. ರೋಡ್, ಮೆಟ್ರೋ ನಿಲ್ದಾಣಗಳು ಕೂಡ ಖಾಲಿಯಾಗಿವೆ.ಕೆ.ಆರ್​. ಮಾರ್ಕೆಟ್, ಯಶವಂತಪುರ ಮಾರ್ಕೆಟ್​ ಸೇರಿದಂತೆ ಎಲ್ಲ ಮಾರ್ಕೆಟ್​ಗಳೂ ಬಿಕೋ ಎನ್ನುತ್ತಿವೆ.

ಬೆಂಗಳೂರಿನ ಎಂ.ಜಿ ರಸ್ತೆ ಕೂಡ ಖಾಲಿಯಾಗಿದ್ದು, ರಸ್ತೆಗಳಲ್ಲಿ ವಾಹನ ಸಂಚಾರವೂ ಇಲ್ಲ. ಪಕ್ಕದ ಬ್ರಿಗೇಡ್ ರೋಡ್ ಸಹ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಬೆಳಗಿನ ವಾಕಿಂಗ್ ಮಾಡುವವರು ಕೂಡ ರೋಡ್​ನಲ್ಲಿ ಕಾಣುತ್ತಿಲ್ಲ.

Related Articles

Back to top button