ಸಚಿವ ಸ್ಥಾನ ತ್ಯಾಗಕ್ಕೂ ಸಿದ್ದ ಎಂದ ಸಚಿವ ಮಾಧುಸ್ವಾಮಿ

ಪ್ರಗತಿವಾಹಿನಿ ಸುದ್ದಿ; ತುಮಕೂರು: ಪಕ್ಷದ ನಾಯಕರು ಸಚಿವ ಸ್ಥಾನ ಬಿಡಲು ಕೇಳಿದರೆ ಖುಷಿಯಿಂದ ಬಿಡುತ್ತೇನೆ. ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಮಂತ್ರಿ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಸಂಪುಟ ರಚನೆ ಕಗ್ಗಂಟಾಗಿರುವ ಹಿನ್ನಲೆಯಲ್ಲಿ ಹೊಸಬರಿಗೆ ಸ್ಥಾನ ನೀಡುವ ಅನಿವಾರ್ಯತೆ ಹೆಚ್ಚಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ. ಪಕ್ಷ ಸಚಿವ ಸ್ಥಾನವನ್ನು ಕೇಳಿದರೆ ಖುಷಿಯಿಂದ ಬಿಟ್ಟುಕೊಡುತ್ತೇನೆ. ರಾಜ್ಯಕ್ಕೆ ಒಳ್ಳೆಯ ಸರ್ಕಾರ ಇರಲಿ ಎನ್ನುವುದು ನನ್ನ ಅಪೇಕ್ಷೆ ಎಂದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಿಎಂ ಬಿ ಎಸ್ ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಣಮಿಸಿದ್ದು, ಹೊಸಬರಿಗೆ ಸ್ಥಾನ ನೀಡುವ ಕಾರಣಕ್ಕೆ ಹಿರಿಯ ನಾಯಕರು ಪದತ್ಯಾಗ ಮಾಡಬೇಕಾಗಬಹುದು ಎಂಬ ಮಾತೂ ಕೇಳಿಬರುತ್ತಿದೆ.

Home add -Advt

Related Articles

Back to top button