Kannada NewsKarnataka NewsLatest

ಜನಕಲ್ಯಾಣ ಟ್ರಸ್ಟ್ ಹೆಸರಿನಲ್ಲಿ ಕೋವಿಡ್ ಸೆಂಟರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಷ್ಟ್ರೀಯ ಸ್ವಯಂ ಸೇವಕಸಂಘ ಹಿಂದಿನ ವರ್ಷದಂತೆ ಈ ವರ್ಷ ಕೂಡ ಜನಕಲ್ಯಾಣ ಟ್ರಸ್ಟ್ ಹೆಸರಿನಲ್ಲಿ ಕೋವಿಡ್ ಸೆಂಟರ್ ಪ್ರಾರಂಭಿಸಲು ನಿರ್ಧರಿಸಿದೆ. ಮಂಗಳವಾರ ಸಂಜೆ ಕೋವಿಡ್ ಸೆಂಟರ್ ಆರಂಭವಾಗಲಿದೆ.

ಕೋವಿಡ್ ಸೆಂಟರ್ ಗೆ ತನು, ಮನ, ಧನದಿಂದ ಸಹಾಯ ಮಾಡಬಹುದು. ಜೊತೆಗೆ, ಸೇವಾ ಮನೋಭಾವ ಇರುವ, ಸಮಾಜದ ಬಗ್ಗೆ ಕಾಳಜಿ ಇರವವರ ಸಹಾಯ, ಸಹಕಾರ ಪಡೆದು ಹೆಚ್ಚೆಚ್ಚು ಕೋವಿಡ್ ಸೆಂಟರ್ ಮಾಡಲು ಪ್ರಯತ್ನಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಉತ್ತರ ಕರ್ನಾಟಕ ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್ ವಿನಂತಿಸಿದ್ದಾರೆ.

ಕಳೆದ ವರ್ಷ ಮಾಡಲಾಗಿದ್ದ ಕೋವಿಡ್ ಸಂಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಅಲ್ಲದೆ, ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕರ್ತರು ಮೇ 5ರಂದು ಆನಗೋಳದ , ಸಂತಮೀರಾ ಶಾಲೆಯಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆಯವರೆಗೆ ರಕ್ತ ದಾನ ಶಿಬಿರ ಸಂಘಟಿಸಿದ್ದು, ಇದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕೆಂದು ಅವರು ಕೋರಿದ್ದಾರೆ.

Home add -Advt

ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಅಗತ್ಯ ಸೌಕರ್ಯ; ನೋಡಲ್ ಅಧಿಕಾರಿ ನೇಮಕ

ಆಕ್ಸಿಜನ್ ಉತ್ಪಾದಕರು ಮತ್ತು ಸರಬರಾಜುದಾರರ ಜೊತೆ ಸಿಎಂ ಮಹತ್ವದ ಸಭೆ

 

Related Articles

Back to top button